ಸಕ್ಕರೆ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

ಎಪಿಎಂಸಿ ಮಾರುಕಟ್ಟೆಯಲ್ಲಿ ಅನಧಿಕೃತ ಮಳಿಗೆಗಳಿಗೆ ಲೈಸೆನ್ಸ್‌ ನೀಡಿದ ಅರೋಪ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮತ್ತೊಬ್ಬರು ಪ್ರಭಾವಿ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಎಪಿಎಂಸಿ ಮಳಿಗೆ ಹಸ್ತಾಂತರ ವಿಚಾರದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಾಗೂ ಎಪಿಎಂಸಿ ಕಾರ್ಯದರ್ಶಿ ದೊರೆಸ್ವಾಮಿ ಅವರ ವಿರುದ್ಧ ಎಪಿಎಂಸಿ ವರ್ತಕರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಸಚಿವರ ವಿರುದ್ಧ ಒಂದಿಲ್ಲೊಂದು ಭ್ರಷ್ಟಾಚಾರ ಆರೋಪ ಆಗಾಗ ಕೇಳಿಬರುತ್ತಲೇ ಇದೆ. ಆರ್‌.ಬಿ ತಿಮ್ಮಾಪೂರ್‌, ಕೆ.ಜೆ ಜಾರ್ಜ್‌, ಪ್ರಿಯಾಂಕ್‌ ಖರ್ಗೆ, ಬೈರತಿ ಸುರೇಶ್.‌ ಎಂ.ಬಿ ಪಾಟೀಲ್‌ ಅವರ ಬಳಿಕ ಈಗ ಶಿವಾನಂದ ಪಾಟೀಲ್ ಸರದಿ.























































 
 

ಶಿವಾನಂದ ಪಾಟೀಲ್ ಅನಧಿಕೃತ ಮಳಿಗೆಗಳಿಗೆ ಲೈಸೆನ್ಸ್‌ ನೀಡಿದ್ದಾರೆ, ಪರವಾನಗಿ ನವೀಕರಣದಲ್ಲಿ ಅಕ್ರಮ ಎಸಗಿದ್ದಾರೆ. ನಕಲಿ ವಿಳಾಸದ ವರ್ತಕರಿಗೆ ಲಂಚ ಪಡೆದು ಲೈಸೆನ್ಸ್‌ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಈ ಬೆನ್ನಲ್ಲೇ ರಾಜಭವನಕ್ಕೂ ಎಪಿಎಂಸಿ ವರ್ತಕರು ದೂರು ನೀಡಿದ್ದಾರೆ.

error: Content is protected !!
Scroll to Top