ಸುರಕ್ಷಿತವಾಗಿ ಭೂಮಿಗೆ ಮರಳಿದ ಆರ್ಟಿಮಿಸ್-2 ಮಿಷನ್‌

ಫೆಸಿಫಿಕ್‌ ಮಹಾಸಾಗರದಲ್ಲಿ ಲ್ಯಾಂಡ್‌ ಆದ ನಾಲ್ವರು ಗಗನಯಾತ್ರಿಗಳು

ನ್ಯೂಯಾರ್ಕ್‌: ಚಂದ್ರನ ಸುತ್ತಲೂ ಐತಿಹಾಸಿಕ ಪ್ರಯಾಣ ಪೂರ್ಣಗೊಳಿಸಿದ ಬಳಿಕ ನಾಸಾದ ಆರ್ಟಿಮಿಸ್-2 ಮಿಷನ್‌ ಈಗ ಭೂಮಿಗೆ ಮರಳಿದೆ. ನಾಲ್ವರು ಗಗನಯಾತ್ರಿಗಳು ಭಾರತೀಯ ಕಾಲಮಾನದ ಪ್ರಕಾರ ಶನಿವಾರ ನಸುಕಿನ ಹೊತ್ತು ಫೆಸಿಫಿಕ್‌ ಮಹಾಸಾಗರದಲ್ಲಿ ಪ್ಯಾರಾಚೂಟ್‌ ಮೂಲಕ ಸುರಕ್ಷಿತವಾಗಿ ಇಳಿದಿದ್ದು, ಅವರನ್ನು ಕೂಡಲೇ ಭೂಮಿಗೆ ಕರೆತರಲಾಗಿದೆ.

ಭೂಮಿಯಿಂದ 4,06,778 ಕಿ.ಮೀ. ದೂರ ಹೋಗಿದ್ದ ಈ ಚಂದ್ರಯಾನ ಮಾನವನ ಇತಿಹಾಸದಲ್ಲಿ ಅತಿ ದೂರದ ಮತ್ತು ಭಾರಿ ದಿಟ್ಟತನದ ಗಗನಯಾನ ಎಂಬ ಹಿರಿಮೆಗೆ ಪಾತ್ರವಾಗಿದೆ.























































 
 

ಐದು ದಶಕಗಳ ಬಳಿಕ ಚಂದ್ರಯಾನ ಕೈಗೊಂಡಿದ್ದ ನಾಸಾದ ಆರ್ಟಿಮಿಸ್-2 ತಂಡ ಶನಿವಾರ ಭೂಮಿಗೆ ವಾಪಸಾಗಿದೆ. ಆರ್ಟಿಮಿಸ್ 2 ಯೋಜನೆಯ ನಾಲ್ವರು ಗಗನಯಾತ್ರಿಗಳಾದ ರೀಡ್ ವೈಸ್‌ಮ್ಯಾನ್, ವಿಕ್ಟರ್ ಗ್ಲೋವರ್, ಕ್ರಿಸ್ಟಿನಾ ಕೋಚ್, ಮತ್ತು ಜೆರೆಮಿ ಹ್ಯಾನ್ಸೆನ್ ಅವರ ತಂಡ ತಮ್ಮ ಪ್ರಯಾಣವನ್ನು ಇಡಿಟಿ ಕಾಲಮಾನದಲ್ಲಿ ಬೆಳಗ್ಗಿನ 11.35ಕ್ಕೆ (ಭಾರತೀಯ ಕಾಲಮಾನದಲ್ಲಿ ರಾತ್ರಿ 9.05) ಆರಂಭಿಸಿದ್ದರು. ಮಧ್ಯಾಹ್ನ 1.50 ಇಡಿಟಿ ಕಾಲಮಾನದಲ್ಲಿ, (ಭಾರತೀಯ ಕಾಲಮಾನ – ರಾತ್ರಿ 11.20) ಅವರು ತಮ್ಮ ಸಣ್ಣ ಕ್ಯಾಪ್ಸೂಲ್‌ ಭೂ ವಾತಾವರಣ ಮರುಪ್ರವೇಶ ಮಾಡಿದೆ.

ನಾಲ್ವರು ವಿಜ್ಞಾನಿಗಳಿಗೂ ರಕ್ತದೊತ್ತಡ, ರಕ್ತಪರಿಚಲನೆ ಕಾಪಾಡಿಕೊಳ್ಳಲು ಸಹಾಯ ಮಾಡುವ ಆರ್ಥೋಸ್ಟಾಟಿಕ್ ಉಡುಪಿನ ಪರೀಕ್ಷೆ ಸೇರಿ ಎಲ್ಲದರ ಪರೀಕ್ಷೆ ಸೇರಿದಂತೆ ಹಲವು ಹಂತಗಳಲ್ಲಿ ತಯಾರಿ ಮಾಡಿಕೊಂಡಿದ್ದರು. ಸಣ್ಣದಾದ ಓರಿಯನ್ ಕ್ಯಾಪ್ಸೂಲ್ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ ಪ್ರತಿ ಗಂಟೆಗೆ ಸುಮಾರು 38,500 ಕಿಲೋಮೀಟರ್ ವೇಗ ಹೊಂದಿರುತ್ತದೆ. ಈ ವೇಗದಲ್ಲಿ, ಗಾಳಿಯ ಜೊತೆಗಿನ ಘರ್ಷಣೆಯ ಪರಿಣಾಮವಾಗಿ ಬಾಹ್ಯಾಕಾಶ ನೌಕೆಯ ಸುತ್ತಲೂ 2,760 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬೆಂಕಿಗೋಡೆಯೇ ನಿರ್ಮಾಣವಾಗುತ್ತದೆ.

error: Content is protected !!
Scroll to Top