ಖಾಸಗಿ ಬಸ್ – ಲಾರಿ ನಡುವೆ ಅಪಘಾತ: ಚಾಲಕರಿಬ್ಬರಿಗೂ ಗಂಭೀರ ಗಾಯ

ಗುರುಪುರ: ಖಾಸಗಿ ಬಸ್ಸು ಮತ್ತು ಲಾರಿಯೊಂದರ ನಡುವೆ ನಡೆದ ಅಪಘಾತದಲ್ಲಿ ಚಾಲಕರಿಬ್ಬರೂ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಘಟನೆ ಬೆಳ್ಳಿಬೆಟ್ಟು ಬಸ್ ನಿಲ್ದಾಣದ ಸಮೀಪ ಬುಧವಾರ ನಡೆದಿದೆ.

ಬಸ್ಸು ಕಾರ್ಕಳದತ್ತ ಹೋಗುತ್ತಿದ್ದರು, ಲಾರಿ ಮಂಗಳೂರಿನ ಕಡೆಗೆ ಸಾಗುತ್ತಿತ್ತು ಎಂದು ತಿಳಿದು ಬಂದಿದೆ. ಅಪಘಾತದ ಭೀಕರತೆಗೆ ಬಸ್ಸು ಮತ್ತು ಲಾರಿಗಳೆರಡರ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗ್ಯಾಸ್ ಕಟ್ಟರ್ ಮಷಿನ್ ಬಳಸಿ ಸ್ಥಳೀಯರು ಚಾಲಕರಿಬ್ಬರನ್ನೂ ವಾಹನದಿಂದ ಹೊರಕ್ಕೆ ತೆಗೆದಿರುವುದಾಗಿದೆ. ಅವರಿಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳ ಜೊತೆಗೆ ಪಾರಾಗಿದ್ದಾರೆ.























































 
 

ಬಜ್ಪೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top