ಅಕ್ರಮ ವಲಸಿಗರ ದೋಣಿ ಮುಳುಗಡೆ : 71 ಮಂದಿ ನಾಪತ್ತೆ

ಲಿಬಿಯಾದಿಂದ ಅಕ್ರಮವಾಗಿ ಯುರೋಪ್‌ಗೆ ಹೋಗಲು ಯತ್ನಿಸಿದಾಗ ದುರಂತ

ರೋಮ್ : ಸಮುದ್ರ ಮಾರ್ಗದ ಮೂಲಕ ಯುರೋಪ್ ತಲುಪಲು ಯತ್ನಿಸುತ್ತಿದ್ದ 100ಕ್ಕೂ ಅಧಿಕ ಅಕ್ರಮ ವಲಸಿಗರ ದೋಣಿ ಮುಳುಗಿದ ದುರಂತ ಘಟನೆ ಇಟಲಿ ಕರಾವಳಿಯಲ್ಲಿ ಸಂಭವಿಸಿದೆ. ದುರಂತದಲ್ಲಿ 71 ವಲಸಿಗರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಆತಂಕ ಎದುರಾಗಿದೆ.

ಲಿಬಿಯಾದಿಂದ ಯುರೋಪ್‌ಗೆ ಹೊರಟಿದ್ದ ಈ ಬೋಟ್‌ನಲ್ಲಿ ಒಟ್ಟು 105 ಜನರಿದ್ದರು ಎಂದು ಬದುಕುಳಿದವರು ತಿಳಿಸಿದ್ದಾರೆ. ಈಸ್ಟರ್ ರಜಾದಿನಗಳ ಸಂದರ್ಭದಲ್ಲಿ ಈ ಪ್ರಯಾಣವನ್ನು ಮಾಡಲಾಗಿತ್ತು. ಮೆಡಿಟರೇನಿಯನ್ ಸಮುದ್ರದ ಭೀಕರ ಅಲೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಬೋಟ್ ಭಾಗಶಃ ಮುಳುಗಿದೆ ಎಂದು ಹೇಳಲಾಗಿದೆ.























































 
 

ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ 32 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಇಬ್ಬರ ಶವಗಳು ಪತ್ತೆಯಾಗಿದ್ದು, ಇನ್ನುಳಿದ 71 ಜನರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಇಟಲಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಡಿಟರೇನಿಯನ್ ಸಮುದ್ರವು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶವಾಗಿ ಮಾರ್ಪಟ್ಟಿದೆ. ಹಳೆಯ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ ಬೋಟ್‌ಗಳ ಮೂಲಕ ನಡೆಯುವ ಇಂತಹ ಪ್ರಯಾಣಗಳು ಪದೇಪದೆ ಇಂತಹ ದುರಂತಗಳಿಗೆ ಕಾರಣವಾಗುತ್ತಿವೆ.

error: Content is protected !!
Scroll to Top