ಪುತ್ತೂರು : ಮಹಾಲಿಂಗೇಶ್ವರ ಜಾತ್ರೋತ್ಸವದ ಪ್ರಯುಕ್ತ ದೇವರ ಪೇಟೆ ಸವಾರಿ ಸೇರಿದಂತೆ ಜನಸಂಖ್ಯೆ ಹೆಚ್ಚಾಗಿರುವ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಮಂಜಾಗ್ರತ ಕ್ರಮವಾಗಿ ವಿದ್ಯುತ್ ಸುರಕ್ಷಾ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಏಪ್ರಿಲ್ 10 ರಿಂದ ಆರಂಭವಾಗುವ ದೇವರಪೇಟೆ ಸವಾರಿಯ ಸಂದರ್ಭ ಯಾವುದೇ ಅನಾಹುತ ಸಂಭವಿಸದಂತೆ ಎಚ್ ಟಿ ಹಾಗೂ ಎಲ್‌ಟಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಹಾಗೂ ತಂತಿಗಳಿಗೆ ವಾಲಿ ನಿಂತಿದ್ದ ಮರದ ಕೊಂಬೆಗಳು ಮತ್ತು ಗೆಲ್ಲುಗಳನ್ನು ಕಡಿಯಲಾಯಿತು. ವಿದ್ಯುತ್ ತಂತಿಗಳ ಸಂಪರ್ಕದಿಂದ ಉಂಟಾಗಬಹುದಾದ ಅಪಾಯಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾರೆ.
ಹಾರಾಡಿ ರೈಲ್ವೆ ಬ್ರಿಜ್ ಪಾಯಿಂಟ್ ನಿಂದ ಬೋಳುವಾರು ಬಂಟರ ಭವನ, ಮಹಾಲಿಂಗೇಶ್ವರ ಐಟಿಐ, ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಹಾಗೂ ಬೋಳುವರು ಕರ್ಮಲ್ ಹೋಂಡಾ ಶೋ ರೂಂ ವರೆಗೆ ಬೃಹತಾಗಿ ಬೆಳೆದ ಮರದ ಗೆಲ್ಲುಗಳನ್ನು ಕಡಿಯಲಾಯಿತು .
ಸಹಾಯಕ ಇಂಜಿನಿಯರ್ ರಾಜೇಶ್ ಕೆ ಅವರ ನೇತೃತ್ವದಲ್ಲಿ ಜೂನಿಯರ್ ಇಂಜಿನಿಯರ್ ದುರ್ಗಾ ಸಿಂಗ್ ದಿನೇಶ್ ಮೇಸ್ತ್ರಿ, ವಿಶ್ವನಾಥ್ ಮೇಸ್ತ್ರಿ ಹಾಗೂ ಪವರ್ ಮ್ಯಾನ್ ಗಳಾದ ಸಂತೋಷ್ ಜಾದವ್, ಲಕ್ಷ್ಮಣ್, ಸಂತೋಷ್ ಮರಿಯಪ್ಪ, ಗಂದಪ್ಪ ಶಿರೂರು, ಶಂಕರಗೌಡ ಪಾಟೀಲ್ ಬಸವರಾಜ್ ಸೇರಿದಂತೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಜಾತ್ರೋತ್ಸವದ ಸಮಯದಲ್ಲಿ ನಿರಂತರವಾಗಿ ವಿದ್ಯುತ್ ಸರಬರಾಜು ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಇಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

























