ಹಾರ್ಮುಜ್‌ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ತಡೆಯಿಲ್ಲ : ಇರಾನ್‌ ಭರವಸೆ

ನಮ್ಮ ಭಾರತೀಯ ಸ್ನೇಹಿತರು ಚಿಂತಿಸುವ ಅಗತ್ಯವಿಲ್ಲ ಎಂದ ಇರಾನ್‌

ಟೆಹ್ರಾನ್ : ಹಾರ್ಮುಜ್‌ ಜಲಸಂಧಿಯ ಬಗ್ಗೆ ನಮ್ಮ ಭಾರತೀಯ ಸ್ನೇಹಿತರು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಭರವಸೆ ನೀಡಿದೆ. ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ಜಂಟಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಸ್ತವ್ಯಸ್ತಗೊಂಡಿರುವ ಪ್ರಮುಖ ಹಡಗು ಮಾರ್ಗವಾದ ಹಾರ್ಮುಜ್‌ ಜಲಸಂಧಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ. ಅವರು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ.

‘ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ. ಚಿಂತಿಸಬೇಡಿ’ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಗುರುವಾರ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ. ವಿಶ್ವದ ಶೇ.20ರಷ್ಟು ಇಂಧನವನ್ನು ಸಾಗಿಸುವ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದೆ.























































 
 

ಕಳೆದ ತಿಂಗಳು ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ ಕೆಲವೇ ಹಡಗುಗಳಿಗೆ ಮಾತ್ರ ಅದನ್ನು ದಾಟಲು ಅವಕಾಶ ನೀಡಿದೆ. ಭಾರತ, ಚೀನಾ, ರಷ್ಯಾ, ಇರಾಕ್ ಮತ್ತು ಪಾಕಿಸ್ತಾನ ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಮೂಲಕ ಹಾದುಹೋಗಲು ಅವಕಾಶ ನೀಡಿರುವುದಾಗಿ ಇರಾನ್ ಹೇಳಿದೆ.

ಈ ದಿಗ್ಬಂಧನವು ಭಾರತ ಸೇರಿದಂತೆ ಹಲವು ದೇಶಗಳಿಗೆ ಇಂಧನ ಪೂರೈಕೆಯಲ್ಲಿ ತೀವ್ರ ಅಡಚಣೆಗಳನ್ನುಂಟುಮಾಡಿದೆ. ಅನಿಲ ಮತ್ತು ಪೆಟ್ರೋಲ್‌, ಡೀಸೆಲ್‌ಗೆ ಸಮಸ್ಯೆ ಎದುರಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಭಾರತಕ್ಕೆ ಇರಾನ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಯಾವುದೇ ತೊಂದರೆಯಾಗದು ಎಂದು ಭರವಸೆ ನೀಡಿದೆ. ಇರಾನಿನ ರಾಯಭಾರ ಕಚೇರಿ ಇಂದು ಹಾರ್ಮುಜ್ ಜಲಸಂಧಿಯ ಬಗ್ಗೆ ಭಾರತಕ್ಕೆ ಭರವಸೆ ನೀಡಿದ್ದು, ಸಂಘರ್ಷ ಮುಂದುವರಿದಿದ್ದರೂ, ಕದನ ವಿರಾಮವನ್ನು ಸಾಧಿಸುವ ಪ್ರಯತ್ನಗಳು ವಿಫಲವಾಗಿದ್ದರೂ ಭಾರತ ಭಯಭೀತವಾಗುವ ಅಗತ್ಯವಿಲ್ಲ ಎಂದು ಹೇಳಿದೆ.

error: Content is protected !!
Scroll to Top