ಇನ್ನು 20 ಸಾವಿರ ಮೇಲ್ಪಟ್ಟು ನಗದು ವ್ಯವಹಾರಕ್ಕೆ ಬ್ರೇಕ್‌

ಹೊಸ ಆರ್ಥಿಕ ವರ್ಷದಲ್ಲಿ ಹಲವು ಹೊಸ ನಿಯಮಗಳು

ಬೆಂಗಳೂರು: ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ. ಹಣಕಾಸು, ಬ್ಯಾಂಕಿಂಗ್, ಸಾರಿಗೆ, ತೆರಿಗೆ ಸೇರಿದಂತೆ ಹಲವು ದೈನಂದಿನ ಚಟುವಟಿಕೆಗಳು ಬದಲಾಗಲಿವೆ. ನಗದು ವ್ಯವಹಾರ ಮತ್ತಷ್ಟು ದುಬಾರಿ ಆಗಲಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಹೊಸ ನಿಯಮಗಳು ಜಾರಿ ಆಗಲಿವೆ.

ನಗದು ಡೆಪಾಸಿಟಿಗೂ ಮಿತಿ, ನಗದು ವಾಪಸ್‌ಗೂ ಮಿತಿ ಇರಲಿದ್ದು, ನಗದು ವ್ಯವಹಾರಕ್ಕೆ ಹೊಸ ಮಿತಿ ನಿಗದಿಗೊಳಿಸಲಾಗಿದೆ. ಬೇಕಾಬಿಟ್ಟಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕಿ, ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದೆ. ನಗದು ವ್ಯವಹಾರ ಮಾಡುವಾಗ ಎಚ್ಚರವಹಿಸಬೇಕಿದ್ದು, ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಕಟ್ಟಬೇಕಾಗುತ್ತೆ.























































 
 

ನಗದು ವ್ಯವಹಾರನಿಯಮಗಳು

  • ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ 2 ಲಕ್ಷಕ್ಕಿಂತ ಹೆಚ್ಚು ಕ್ಯಾಶ್ ಪಡೆಯುವಂತಿಲ್ಲ
  • ಆಸ್ತಿ ಖರೀದಿ ವೇಳೆ 20 ಸಾವಿರಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ
  • ಕೈಸಾಲ ಕೂಡ 20 ಸಾವಿರಕ್ಕಿಂತ ಜಾಸ್ತಿ ನಗದು ರೂಪದಲ್ಲಿ ತೆಗೆದುಕೊಳ್ಳಬಾರದು
  • 20,000ಕ್ಕಿಂತ ಜಾಸ್ತಿ ನಗದು ರೂಪದಲ್ಲಿ ಸೆಕ್ಯುರಿಟಿ ಡೆಪಾಸಿಟ್ ತೆಗೆದುಕೊಂಡರೆ 100% ದಂಡ
  • ಸೆಕ್ಯುರಿಟಿ ಡೆಪಾಸಿಟ್ 20 ಸಾವಿರಕ್ಕಿಂತ ಹೆಚ್ಚು ನಗದು ರೂಪದಲ್ಲಿ ವಾಪಸ್ ಕೊಟ್ಟರೆ 100 ದಂಡ

ದುಬಾರಿ ದುನಿಯಾ

ನೀರು, ಕರೆಂಟ್, ಟೋಲ್ ಸೇರಿ ಎಲ್ಲವೂ ದುಬಾರಿ ಆಗಲಿವೆ. ಕೇಂದ್ರ, ರಾಜ್ಯ ಸರ್ಕಾರಗಳೆರಡು ಜನಸಾಮಾನ್ಯರಿಗೆ ಬರೆ ಎಳೆದಿವೆ. ನೀರಿನ ದರ, ವಿದ್ಯುತ್ ದರ ಏರಿಕೆ ರಾಜ್ಯ ಸರ್ಕಾರದ ಕೃಪೆ, ಟೋಲ್ ದರ ಹೆಚ್ಚಳ ಕೇಂದ್ರ ಸರ್ಕಾರದ ಕೃಪೆ. ಟೋಲ್ ದರ ಹೆಚ್ಚಳದ ಜೊತೆಗೆ ಪಾಸ್ ದರವೂ ಹೆಚ್ಚಳವಾಗಲಿದೆ.

ಟ್ರೇಡಿಂಗ್ ಶುಲ್ಕ, ಕೆಲ ಕಂಪನಿಗಳ ವಾಹನಗಳ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಆದರೆ ಈ ಬೆಲೆ ಏರಿಕೆ ನಡುವೆ ರಸ್ತೆ ಅಪಘಾತ ವಿಮೆ ಟ್ಯಾಕ್ಸ್‌ನಿಂದ ವಿನಾಯಿತಿ ಇದ್ದು, ಎಂಎಸ್‌ಎಂಐಗಳಿಗೆ 25 ಲಕ್ಷ ತನಕ ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಬಹುದಾಗಿದೆ.

error: Content is protected !!
Scroll to Top