ಇರಾನ್‌ ಮೇಲೆ 907 ಕೆ.ಜಿ. ಬಂಕರ್‌ ಬಸ್ಟರ್‌ ಬಾಂಬ್‌ ಹಾಕಿದ ಅಮೆರಿಕ

ಬದ್ರ್‌ ಮಿಲಿಟರಿ ವಾಯುನೆಲೆಯ ಮೇಲೆ ದಾಳಿ

ಟೆಹ್ರಾನ್‌ : ಇರಾನ್‌ನ ಇಸ್ಪಹಾನ್‌ ನಗರದಲ್ಲಿರುವ ಮಿಲಿಟರಿ ಕೇಂದ್ರದ ಮೇಲೆ ಅಮೆರಿಕ ಸುಮಾರು 907 ಕೆಜಿ ಬಂಕರ್‌ ಬಸ್ಟರ್‌ ಬಾಂಬ್‌ಗಳಿಂದ ದಾಳಿ ನಡೆಸಿದೆ. ಈ ಸ್ಫೋಟದ ವೀಡಿಯೊವೊಂದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ.

ಮಂಗಳವಾರ ಮುಂಜಾನೆ ಇಸ್ಫಹಾನ್ ನಗರದಲ್ಲಿ ಈ ಸ್ಫೋಟ ಸಂಭವಿಸಿದೆ. ದಾಳಿಯ ತೀವ್ರತೆಯಿಂದ ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ಚಿಮ್ಮುವ ದೃಶ್ಯ ವೈರಲ್‌ ಆಗಿದೆ. ಟ್ರಂಪ್ ಈ ವೀಡಿಯೊ ಬಗ್ಗೆ ಯಾವುದೇ ನಿಖರ ಮಾಹಿತಿ ಉಲ್ಲೇಖಿಸಿಲ್ಲ. ಆದರೆ ಇದು ಇರಾನ್‌ನ ಇಸ್ಫಹಾನ್‌ ನಗರದಲ್ಲಿರುವ ಬದ್ರ್‌ ಮಿಲಿಟರಿ ವಾಯುನೆಲೆಯ ಮೇಲೆ ಅಮೆರಿಕ – ಇಸ್ರೇಲ್‌ ನಡೆಸಿದ ಜಂಟಿ ದಾಳಿ ಎಂದು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.























































 
 

ಒಂದು ದಿನದ ಹಿಂದಷ್ಟೇ ಅಧ್ಯಕ್ಷ ಟ್ರಂಪ್ ಇರಾನ್ ಯುದ್ಧ ಕೊನೆಗೊಳಿಸುವ ಒಪ್ಪಂದಕ್ಕೆ ಶೀಘ್ರವೇ ಬರದಿದ್ದರೆ, ಆ ದೇಶದ ಇಂಧನ ಮೂಲಗಳು, ಪರಮಾಣು ಕೇಂದ್ರಗಳು ಮತ್ತು ನೀರು ಸರಬರಾಜು ಘಟಕಗಳೂ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನೂ ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದರು.

ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಅತ್ಯಂತ ಹತ್ತಿರದಲ್ಲಿದೆ ಎಂದು ಅಮೆರಿಕ ಮತ್ತು ಇಸ್ರೇಲ್ ಪದೇ ಪದೆ ಆರೋಪಿಸುತ್ತಿವೆ. ಆದರೆ ವಿಶ್ವಸಂಸ್ಥೆಯ ಪರಮಾಣು ಕಣ್ಣಾವಲು ಸಂಸ್ಥೆಯು ಈ ಆರೋಪವನ್ನು ಇನ್ನು ಪುಷ್ಟಿಕರಿಸಿಲ್ಲ. ಕಳೆದ ವರ್ಷವೂ ಇರಾನ್‌ನ ಕೆಲವು ಪ್ರಮುಖ ಕೇಂದ್ರಗಳ ಮೇಲೆ ಟ್ರಂಪ್ ದಾಳಿ ನಡೆಸಿದ್ದರು. ಈಗಿನ ಈ ದಾಳಿಯು ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

error: Content is protected !!
Scroll to Top