ಕಡಬ: ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ಸನ್ನಿಧಿ ಕುದ್ಮಾರು ಇಲ್ಲಿ ಎ. 6 ರಂದು ಮಂತ್ರವಾದಿ ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವದ ನೇಮೋತ್ಸವ ಜರುಗಲಿದೆ.
ಎ. 6 ರಂದು ಸಂಜೆ ಗಂಟೆ 6 ಕ್ಕೆ ದೈವಗಳ ಭಂಡಾರ ತೆಗೆಯುವುದು ರಾತ್ರಿ ಗಂಟೆ 7 ರಿಂದ ಗುಳಿಗ ದೈವದ ನೇಮ ರಾತ್ರಿ ಗಂಟೆ 9 ರಿಂದ ಅನ್ನಸಂತರ್ಪಣೆ ರಾತ್ರಿ ಗಂಟೆ 10 ರಿಂದ ಕಲ್ಲುರ್ಟಿ ದೈವದ ನೇಮ ನಡೆಯಲಿದೆ. ಹಾಗೆಯೇ ಎ. 7 ರಂದು ಬೆಳಿಗ್ಗೆ ಗಂಟೆ 6 ರಿಂದ ಕೊರಗಜ್ಜ ದೈವದ ನೇಮ ನಡೆಯಲಿದೆ.
ಭಕ್ತಾದಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ದೈವಗಳ ಪ್ರಸಾದ ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗುವಂತೆ ಸೇವಾಕರ್ತರು ಮನವಿ ಮಾಡಿದ್ದಾರೆ.

























