ಭಾರಿ ದುರಂತದಲ್ಲಿ ಎಲ್ಲ 121 ಮಂದಿ ಸಾವಿಗೀಡಾಗಿರುವ ಶಂಕೆ
ವಾಷಿಂಗ್ಟನ್ : ಅಮೆರಿಕದ ಕೊಲಂಬಿಯಾದಲ್ಲಿ ಭಾರಿ ವಿಮಾನ ದುರಂತ ಸಂಭವಿಸಿದ್ದು, ದೇಶದ ಮಿಲಿಟರಿಗೆ ದೊಡ್ಡ ಆಘಾತ ತಂದಿದೆ. ವಾಯುಪಡೆಯ ಹರ್ಕ್ಯುಲಸ್ C-130 ಮಿಲಿಟರಿ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಕನಿಷ್ಠ 8 ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ವಿಮಾನದಲ್ಲಿ ಸುಮಾರು 110 ಸೈನಿಕರ ಸಹಿತ 121 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ದುರಂತದಲ್ಲಿ ಎಲ್ಲರೂ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಕೊಲಂಬಿಯಾದ ಮಿಲಿಟರಿ ಅಧಿಕಾರಿಗಳು ಇನ್ನೂ ಅಧಿಕೃತವಾಗಿ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೇ ಅಥವಾ ಇತರ ಕಾರಣಗಳಿಂದ ಈ ಘಟನೆ ಸಂಭವಿಸಿತೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಘಟನೆಯ ನಂತರ ರಕ್ಷಣಾ ಕಾರ್ಯಾಚರಣೆಗಳು ತಕ್ಷಣವೇ ಆರಂಭಗೊಂಡಿದ್ದು, ಅವಶೇಷಗಳ ಶೋಧ ಕಾರ್ಯ ನಡೆಯುತ್ತಿದೆ. ಈ ದುರಂತವು ದೇಶದಾದ್ಯಂತ ದುಃಖದ ವಾತಾವರಣ ಸೃಷ್ಟಿಸಿದೆ.

























