ಹರ್ಮುಜ್ ಜಲಸಂಧಿಯು ಈಗ ಹಡಗುಗಳ ಸಂಚಾರಕ್ಕೆ ಮುಕ್ತ ಎಂದ ಇರಾನ್

ನವದೆಹಲಿ: ಇರಾನಿನ ಶತ್ರು ರಾಷ್ಟ್ರಗಳನ್ನು ಹೊರತು ಪಡಿಸಿ, ಇತರ ರಾಷ್ಟ್ರಗಳಿಗೆ ಹರ್ಮುಜ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸಲು ಇರಾನ್ ಅವಕಾಶ ನೀಡಿದೆ.

ಅಮೆರಿಕಾ ಅಧ್ಯಕ್ಷ ಟ್ರಂಪ್ ಈ ವಿಷಯಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಂತಹ ಒಂದು ನಿರ್ಣಯಕ್ಕೆ ಇರಾನ್ ಬಂದಿದೆ. ಇರಾನಿನ ಶತ್ರು ರಾಷ್ಟ್ರಗಳ ಹಡಗುಗಳನ್ನು ಹೊರತುಪಡಿಸಿದಂತೆ ಇತರ ರಾಷ್ಟ್ರಗಳ ಹಡಗುಗಳಿಗೆ ಹರ್ಮುಜ್ ಜಲಸಂಧಿ ಮುಕ್ತವಾಗಿದೆ.

ಮುಂದಿನ ನಲವತ್ತೆಂಟು ಗಂಟೆಗಳ ಒಳಗಾಗಿ ಹರ್ಮುಜ್ ಹಡಗುಗಳ ಸಂಚಾರಕ್ಕೆ ಮುಕ್ತವಾಗದೇ ಹೋದಲ್ಲಿ ಇರಾನಿನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ಸ್ಪೋಟ ಮಾಡುವ ಬೆದರಿಕೆಯನ್ನು ಅಮೆರಿಕಾ ಹಾಕಿತ್ತು. ಈ ಎಚ್ಚರಿಕೆಯ ಬಳಿಕ ಇರಾನ್ ಇಂತಹ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿದೆ.























































 
 

ಹರ್ಮುಜ್ ಜಲಸಂಧಿಯ ನಿರ್ಬಂಧದಿಂದಾಗಿ ಜಾಗತಿಕವಾಗಿ ತೈಲ ಬಿಕ್ಕಟ್ಟು ಸೃಷ್ಟಿಯ ಎಲ್ಲಾ ಸಾಧ್ಯತೆಗಳೂ ಇದ್ದು, ಇದೀಗ ಆ ನಿರ್ಬಂಧವನ್ನು ಶತ್ರು ರಾಷ್ಟ್ರಗಳಿಗೆ ಹೊರತಾದಂತೆ, ಇತರ ರಾಷ್ಟ್ರಗಳಿಗೆ ತೆರವುಗೊಳಿಸುವ ಮೂಲಕ ಇರಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

error: Content is protected !!
Scroll to Top