ಮೂಡಬಿದ್ರೆ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾರ್ಕಳದಲ್ಲಿ ನಡೆದಿದ್ದ ಆ್ಯಕ್ಸಿಡೆಂಟ್ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಚ ಘಟನೆ ನಡೆದಿದೆ.
ಪಡುಮಾರ್ನಾಡು ನಿವಾಸಿ ಸಾತ್ವಿಕ್ ಕುಲಾಲ್(21) ಎಂಬವರೇ ಮೃತ ದುರ್ದೈವಿ.
ಸಾತ್ವಿಕ್ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಅವರಿಗೆ ಕಳೆದ 2025 ರ ಅಕ್ಟೋಬರ್ ತಿಂಗಳಿನಲ್ಲಿ ಬೈಕ್ ಆ್ಯಕ್ಸಿಡೆಂಟ್ ಸಂಭವಿಸಿತ್ತು. ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿರುವುದಾಗಿದೆ.

























