ಉಜಿರೆ: ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಯಕ್ಷಭಾರತಿ ರಿ. ಕನ್ಯಾಡಿ ಹನ್ನೊಂದನೇ ವಾರ್ಷಿಕ ಸಮಾರಂಭದಲ್ಲಿ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ರೂಪಿಸಲಾದ “ದಶಪರ್ವ” ಸ್ಮರಣ ಸಂಚಿಕೆಯನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ಶಾಸಕ ಪ್ರತಾಪಸಿಂಹ ನಾಯಕ್ ಲೋಕಾರ್ಪಣೆಗೊಳಿಸಿದರು.
ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಕಲಾ ಪೋಷಕ ಶ್ರೀಪತಿ ಭಟ್, ಮೂಡಬಿದಿರೆ ಸಂಪಾದಕ ಮಂಡಳಿಯ ಮಹೇಶ ಕನ್ಯಾಡಿ, ಹರಿದಾಸ ಗಾಂಭೀರ, ಭವ್ಯ ಹೊಳ್ಳ, ಕೌಶಿಕ್ ರಾವ್ ಕನ್ಯಾಡಿ, ರತ್ನವರ್ಮ ಜೈನ್ ಧರ್ಮಸ್ಥಳ ಉಪಸ್ಥಿತರಿದ್ದರು.
ದಶಪರ್ವದ ಸಂಪಾದಕ ದಿವಾಕರ ಆಚಾರ್ಯ ಗೇರುಕಟ್ಟೆ ಸಂಚಿಕೆಗೆ ವಿವಿಧ ಲೇಖನಗಳನ್ನು ನೀಡಿದ ಲೇಖಕರಿಗೆ, ಜಾಹೀರಾತುಗಳನ್ನು ನೀಡಿ ಸಹಕರಿಸಿದ ಮಹನೀಯರಿಗೆ ಮತ್ತು ವಿನ್ಯಾಸಗೊಳಿಸಿ ಅಂದವಾಗಿ ಮುದ್ರಿಸಿದ ಉಜಿರೆ ಮಂಜುಶ್ರೀ ಪ್ರಿಂಟರ್ಸ್ ಇವರಿಗೆ ಕೃತಜ್ಞತೆ ಸಲ್ಲಿಸಿದರು.

























