ಡಾ. ರಾಜ್ ನಟನೆಯ ಚಿತ್ರದ ಹಾಡಿನ ಲಿಂಕ್ ಹಂಚಿಕೊಂಡ ಪ್ರಧಾನಿ ಮೋದಿ

ನವದೆಹಲಿ: ಪ್ರಸಿದ್ಧ ಚಲನಚಿತ್ರ ನಟ, ಕರುನಾಡ ಅಣ್ಣಾವ್ರು ವರನಟ ಡಾ‌. ರಾಜ್‌ಕುಮಾರ್ ಅವರ ಅಭಿಮಾನಿಗಳ ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ಮೂಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ರಾಜ್‌ಕುಮಾರ್ ಅವರ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ರಾಜ್ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದೆ. ರಾಜ್‌ಕುಮಾರ್ ಅಭಿನಯದ ಶ್ರೀ ಕೃಷ್ಣದೇವರಾಯ ಚಿತ್ರದ ‘ಶ್ರೀ ಚಾಮುಂಡೇಶ್ವರಿ’ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಅವರು ‘ದೇವಿಯ ಮೇಲಿನ ನಂಬಿಕೆ ಭಕ್ತರಿಗೆ ಹೊಸ ಶಕ್ತಿ ನೀಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಈ ಹಾಡನ್ನು ಪಿ. ಲೀಲಾ ಮತ್ತು ಎಸ್. ಗೋವಿಂದರಾಜು ಅವರು ಹಾಡಿದ್ದಾರೆ. ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯ ಇದಾಗಿದೆ. ಟಿ.ಜಿ. ಲಿಂಗಪ್ಪ ಅವರ ಸಂಗೀತವಿದೆ.























































 
 

https://x.com/narendramodi/status/2035176793637101982?ref_src=twsrc%5Etfw%7Ctwcamp%5Etweetembed%7Ctwterm%5E2035176793637101982%7Ctwgr%5E3f5a50c3904c917a30201273a8918583a769d692%7Ctwcon%5Es1_c10&ref_url=https%3A%2F%2Fhosadigantha.com%2Fpm-modi-shared-annavra-song-why-do-you-know%2F

error: Content is protected !!
Scroll to Top