ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬರಲಿವೆ ಮತ್ತೆರಡು ಎಲ್‌ಪಿ‌ಜಿ ಹೊತ್ತ ಹಡಗುಗಳು?

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ ಟ್ಯಾಂಕರ್‌ಗಳು ಭಾರತೀಯ ಧ್ವಜದೊಂದಿಗೆ ಹರ್ಮುಜ್ ಜಲಸಂಧಿ ದಾಟಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಇರಾನ್ ಮತ್ತು ಇಸ್ರೇಲ್, ಅಮೆರಿಕಾ ನಡುವಿನ ಯುದ್ಧ ಆರಂಭವಾದಾಗಿಂದ ಈ ಜಲಸಂಧಿಯ ಮೂಲಕ ಈ ವರೆಗೆ ಭಾರತದ ಅನಿಲ ತುಂಬಿದ ಹಡಗುಗಳನ್ನು ಬಿಟ್ಟು ಬೇರೆ ಯಾವ ರಾಷ್ಟ್ರದ ಹಡಗುಗಳಿಗೂ ಅನಿಲ ರವಾನೆಗೆ ಇರಾನ್ ಅವಕಾಶ ನೀಡಿಲ್ಲ.

ಆದರೆ ಭಾರತದ ರಾಜತಾಂತ್ರಿಕ ನೀತಿಯಿಂದಾಗಿ ಭಾರತದ ಶಿವಾಲಿಕ್ ಮತ್ತು ನಂದಾದೇವಿ ಹಡಗುಗಳು ಹರ್ಮುಜ್ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂದಿದ್ದವು. ಇದೀಗ ಗಲ್ಫ್ ಸಮುದ್ರದಲ್ಲಿ ಲಂಗರು ಹಾಕಿರುವ ಭಾರತದ ಇನ್ನೂ ಎರಡು ಹಡಗುಗಳು ಶೀಘ್ರದಲ್ಲೇ ಹರ್ಮುಜ್ ಜಲಸಂಧಿಯನ್ನು ದಾಟುವ ಸಾಧ್ಯತೆ ಇದೆ. ಶಾರ್ಜಾ ಬಳಿ ಭಾರತದ ಪತಾಕೆ ಹೊಂದಿರುವ ಎಲ್‌ಪಿ‌ಜಿ ಟ್ಯಾಂಕರ್‌ಗಳಾದ ಪೈನ್ ಗ್ಯಾಸ್ ಮತ್ತು ಜಗ್ ವಸಂತ್ ಪ್ರಯಾಣಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ.























































 
 

error: Content is protected !!
Scroll to Top