ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪೂರ್ವಾಧ್ಯಕ್ಷ, ಸುಳ್ಯ ಸುದ್ಧಿ ಬಿಡುಗಡೆಯ ಪ್ರಧಾನ ಸಂಪಾದಕ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು , ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪತ್ರಿಕಾ ಮಾಧ್ಯಮ ಯಾವಾಗಲೂ ಧನಾತ್ಮಕ ಅಂಶಗಳನ್ನೇ ಬಿಂಬಿಸುವ ಕೆಲಸ ಮಾಡಬೇಕು ಎಂದು ಕರೆಕೊಟ್ಟರು.
ದ. ಕ. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಸುದ್ದಿ ಬಿಡುಗಡೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೃಜನ್ ಊರುಬೈಲ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಪಿ.ಬಿ., ಸುಳ್ಯ ತಾಲೂಕು ಒಕ್ಕೂಟಗಳ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ. ಕಾನತ್ತೂರ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ಅಧ್ಯಕ್ಷ ಯಶ್ವಿತ್ ಕಾಳಮನೆ ಮತ್ತು ನಿಯೋಜಿತ ಖಜಾಂಜಿ ಕೆನ್ಯೂಟ್ ಪಿಂಟೋ ಅತಿಥಿಯವರಾಗಿ ಉಪಸ್ಥಿತರಿದ್ದರು.

ನಿಯೋಜಿತ ಜಿಲ್ಲಾಧ್ಯಕ್ಷ ಈಶ್ವರ ವಾರಣಾಸಿ ಪ್ರಸ್ತಾವನೆ ಮಾತುಗಳನ್ನಾಡಿ ಸರ್ವರನ್ನೂ ಸ್ವಾಗತಿಸಿದರು. ನಿಯೋಜಿತ ಪ್ರಧಾನ ಕಾರ್ಯದರ್ಶಿ ಜ್ಯೋತಿಪ್ರಕಾಶ್ ಪುಣಚ ಧನ್ಯವಾದ ಸಮರ್ಪಣೆ ಮತ್ತು ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಣೆಗಳಲ್ಲಿ ಸಹಕರಿಸಿದರು. ನ್ಯೂಸ್ ಪುತ್ತೂರು ವ್ಯಾಸ್ಥಾಪಕ ಸೀತಾರಾಮ ಕೇವಳ ಅಭಿಪ್ರಾಯ ಮಂಡಿಸಿ ಶುಭ ಹಾರ8ಸಿದರು
























