ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ

ಬೆಳ್ತಂಗಡಿ: ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ಆರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಬಣ್ಣದ ವೇಷದಾರಿಯಾಗಿ ಖ್ಯಾತಿ ಪಡೆದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವದ ಸಂಸ್ಮರಣ ಕಾರ್ಯಕ್ರಮ ಬೆಳ್ತಂಗಡಿಯ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ರವಿ ಜೋಯಿಷ್. ಯಂ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ಅರ್ಚಕರಾದ ಸುರೇಶ್ ಪುತ್ತೂರಾಯ ವಹಿಸಿದ್ದರು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಬಣ್ಣದ ವೇಷದಲ್ಲಿ ಅಪ್ರತಿಮ ಸಾಧನೆ ಮಾಡಿದ ಸಕಟ್ಟು ದೇಶ ಮತ್ತು ವಿದೇಶಗಳಲ್ಲಿ ತಮ್ಮ ಅದ್ಭುತವಾದ ಪಾತ್ರ ಅಭಿವ್ಯಕ್ತಿಯಿಂದ ಬಣ್ಣದ ಸಕ್ಕಟ್ಟು ಎಂಬ ಪ್ರಸಿದ್ಧಿಯನ್ನು ಪಡೆದವರೆಂದು ಹೇಳಿದರು.





















































 
 

ಯಕ್ಷಗಾನ ಕಲಾವಿದ- ಸಂಘಟಕ ಶ್ರೀಧರ ಎಸ್. ಪಿ. ಕೃಷ್ಣಾಪುರ ಇವರನ್ನು ಸಂಸ್ಮರಣೆ ಅಂಗವಾಗಿ ಸನ್ಮಾನಿಸಲಾಯಿತು. ಕಲಾವಿದನಾಗಿ ಹೊಣೆಗಾರಿಕೆಯಿಂದ ಭಾಗವಹಿಸಲು ಈ ಸನ್ಮಾನವು ಪ್ರೇರಣೆಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಯಕ್ಷಗಾನ ಕಲಾವಿದ ಗೋಪಾಲ ಶೆಟ್ಟಿ ಕಳೆಂಜ, ಕಾಳಿಕಾಂಬ ಟ್ರಸ್ಟಿನ ಕಾರ್ಯದರ್ಶಿ ಶ್ರೀಪತಿ ಭಟ್,ಪವಿತ್ರಾಕ್ಷಿ ಶ್ರೀಧರ್,ಸಂಜೀವ ಪಾರೆಂಕಿ ಉಪಸ್ಥಿತರಿದ್ದರು. ಕಲಾವಿದ ಜಯರಾಮ ಪೂಜಾರಿ,ಸುರೇಶ ಪುತ್ತೂರಾಯ ಇವರನ್ನು ಗೌರವಿಸಲಾಯಿತು.

ಸಕ್ಕಟ್ಟು ಸಂಸ್ಮರಣ ಸಮಿತಿಯ ಪರವಾಗಿ ಪ್ರದೀಪ್ ಹೆಬ್ಬಾರ ಚಾರ ಸ್ವಾಗತಿಸಿ ಅಭಿನಂದನಾ ನುಡಿಗಳನ್ನಾಡಿದರು.

ಬಳಿಕ ಜರಗಿದ ಗಣೇಶ ಕೊಲಕಾಡಿ ವಿರಚಿತ ಭೀಮ ಭಕ್ತಿ ತಾಳಮದ್ದಳೆಯಲ್ಲಿ ಭಾಗವತರಾಗಿ ಕಿಶೋರ್ ಶೆಟ್ಟಿ ಮಡಂತ್ಯಾರು, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ
ಅರ್ಥಧಾರಿಗಳಾಗಿ ಜಿನೇಂದ್ರ ಜೈನ್ ಬಳ್ಳಮಂಜ(ಭೀಮ ) ದಿವಾಕರ ಆಚಾರ್ಯ ಹಳೆನೇರೆಂಕಿ(ಅರ್ಜುನ) ಸಂಜೀವ ಪಾರೆಂಕಿ(ಧರ್ಮರಾಯ) ಪ್ರದೀಪ ಹೆಬ್ಬಾರ್(ಈಶ್ವರ ) ಪೂರ್ಣಿಮಾ ಪುತ್ತೂರಾಯ (ದ್ರೌಪದಿ) ಭಾಗವಹಿಸಿದ್ದರು.

error: Content is protected !!
Scroll to Top