ವಿಟ್ಲ: ಭೀಕರ ಅಗ್ನಿ ಅವಘಡದಲ್ಲಿ ಆರಕ್ಕೂ ಅಧಿಕ ಅಂಗಡಿಗಳು ಭಸ್ಮ

ಇಲೆಕ್ಟ್ರಾನಿಕ್ಸ್‌ ಅಂಗಡಿಯಿಂದ ವ್ಯಾಪಿಸಿದ ಬೆಂಕಿಯಿಂದ ಅಪಾರ ನಾಶ ನಷ್ಟ

ವಿಟ್ಲ : ನಗರದ ಮಂಗಳೂರು ರಸ್ತೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಆರು ಅಂಗಡಿಗಳು ಸುಟ್ಟುಹೋಗಿವೆ. ಕ್ಷಣಾರ್ಧದಲ್ಲಿ ಐದಾರು ಮಳಿಗೆಗಳಿಗೆಬೆಂಕಿ ಹಬ್ಬಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.

ಸಂತೋಷ್ ಕುಮಾರ್ ಕೊಡಂಗೆ ಎಂಬವರ ಮಾಲಕತ್ವದ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯೊಳಗಿದ್ದ ಇಲೆಕ್ಟ್ರಾನಿಕ್ ಉಪಕರಣಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳಿದ್ದ ಕಾರಣ ಜ್ವಾಲೆಯ ತೀವ್ರತೆ ಏಕಾಏಕಿ ಹೆಚ್ಚಾಗಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬಾರದ ಮಟ್ಟಿಗೆ ಅಗ್ನಿಯ ಜ್ವಾಲೆ ಅಬ್ಬರಿಸಿದೆ. ಇಲೆಕ್ಟ್ರಾನಿಕ್ಸ್ ಅಂಗಡಿಯಿಂದ ಹಬ್ಬಿದ ಬೆಂಕಿ ಪಕ್ಕದಲ್ಲೇ ಇದ್ದ ಸಣ್ಣಪುಟ್ಟ ಅಂಗಡಿಗಳನ್ನು ಆವರಿಸಿದೆ. ಬೆಂಕಿಯ ಕೆನ್ನಾಲಗೆ ಸಮೀಪದ ಅಮಿತ್ ಹೋಟೆಲ್‌ವರೆಗೂ ವಿಸ್ತರಿಸಿದ್ದು, ಹೋಟೆಲ್ ಮತ್ತು ಇತರ ಮಳಿಗೆಗಳಿಗೂ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ.





















































 
 

ಬೆಂಕಿ ಸ್ಟಾರ್ ವೈನ್ಸ್‌ವರೆಗೂ ಹರಡಿದ್ದು, ಇದರ ನಡುವೆ ಇದ್ದ ಎಸ್‌.ಬಿ. ಟೈಲರಿಂಗ್ ಶಾಪ್, ಪಡೀಲ್ ಫಾಸ್ಟ್‌ಫುಡ್, ಸಹಿತ ಸಣ್ಣ ಅಂಗಡಿಗಳೂ ಬೆಂಕಿಗೆ ಆಹುತಿಯಾಗಿವೆ. ಬಂಟ್ವಾಳದಿಂದ ಅಗ್ನಿಶಾಮಕ ವಾಹನ ಬಂದಿದ್ದು, ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿಯ ರೌದ್ರಾವತಾರಕ್ಕೆ ಸಿಲುಕಿ ಹಲವು ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಬಂಟ್ವಾಳದಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಿವೆ.

error: Content is protected !!
Scroll to Top