ಬೆಂಗಳೂರು: ಅಪ್ಪ ಮತ್ತು ಅಮ್ಮ ಜೊತೆಯಾಗಿಲ್ಲ, ಬೇರ್ಪಟ್ಟಿದ್ದಾರೆ ಎಂದು ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಮೃತಳನ್ನು ಲೇಖನಾ (17) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಫೇಲ್ ಆಗಿದ್ದ ಲೋಕ ನಾ ತನ್ನ ತಾಖಿಯ ಜೊತೆ ವಾಸಿಸುತ್ತಿದ್ದಳು. ಕೌಟುಂಬಿಕ ಕಲಹದಿಂದ ತಂದೆ ಮತ್ತು ತಾಯಿ ಬೇರೆ ಬೇರೆ ವಾಸ ಮಾಡುತ್ತಿದ್ದರು. ಇದರಿಂದ ಬಾಲಕಿ ಮನ ನೊಂದಿದ್ದಳು.
ಲೇಖನಾ ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ನನಗೆ ತಂದೆ – ತಾಯಿಯ ಪ್ರೀತಿ ಸಿಗುತ್ತಿಲ್ಲ. ನಾನು ಒಂಟಿ ಎನ್ನುವ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಉಲ್ಲೇಖಿಸಿದ್ದಾಳೆ. ಬಾಲಕಿಯ ಶವವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























