ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕನಿಗೆ ಯುವತಿಯಿಂದ ತಕ್ಕ ಶಾಸ್ತಿ

ಕಾರವಾರ: ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಸಂತ್ರಸ್ತೆ ಸರಿಯಾಗಿ ಪಾಠ ಕಲಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ.

ಯುವತಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಕಾಮುಕ ಯುವಕ ಆಕೆಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದು, ಇದರಿಂದ ಎಚ್ಚರಗೊಂಡ ಯುವತಿ ಕೂಡಲೇ ಆತನ ಮಾನಗೇಡಿ ವರ್ತನೆಯನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾಳೆ. ಆ ಬಳಿಕ ಆ ಯುವಕನ ವಿರುದ್ಧ ಸಮರ ಸಾರಿದ್ದಾಳೆ.

ವಿಡಿಯೋ ರೆಕಾರ್ಡ್ ಸಾಕ್ಷ್ಯದ ಮೂಲಕ ಬಸ್ಸಿನಲ್ಲೇ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಯುವತಿಯ ಧೈರ್ಯಕ್ಕೆ ನಾಡಿನೆಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಸಾರ್ವಜನಿಕವಾಗಿ ಆತನ ಬಂಡವಾಳ ಬಯಲು ಮಾಡಿದ್ದಾಳೆ. ಜೊತೆಗೆ ಈ ವಿಡಿಯೋವನ್ನು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ‌ಟ್ಯಾಗ್ ಮಾಡಿದ್ದು, ನಮ್ಮ ರಕ್ಷಣೆ ನಮ್ಮ ಕೈಯಲ್ಲೇ ಎಂಬ ಸಂದೇಶವನ್ನೂ ರವಾನಿಸಿದ್ದಾಳೆ.





















































 
 
error: Content is protected !!
Scroll to Top