ಎಂ‌ಬಿ‌ಎ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ನಗರದ ಹೊರವಲಯದ ಹೆಸರುಘಟ್ಟ ರಸ್ತೆಯ ಶಾಂತಿನಗರ ಎಂಬಲ್ಲಿ ಎಂಬಿಎ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತನನ್ನು ಕೇರಳ ಮೂಲಕ ಜಗನ್ ಮೋಹನ್(25) ಎಂದು ಗುರುತಿಸಲಾಗಿದೆ.

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಗನ್ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಡೆತ್‌ನೋಟ್‌ನಲ್ಲಿ ವಿಡಿಯೋ ಕಾಲ್ ಮೂಲಕ ಟಾರ್ಚರ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದು, ಮೂರು ನಂಬರ್‌ಗಳನ್ನು ‌ಸಹ ಬರೆದಿಟ್ಟಿದ್ದಾನೆ.





















































 
 

ಫೇಕ್ ‌ವಿಡಿಯೋ‌ ಕಾಲ್‌ನಲ್ಲಿ ಹಣ ಕಳಕೊಂಡಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರೆತಿದೆ. 25 ಸಾವಿರ ರೂ. ವರ್ಗಾಯಿಸಿರುವುದು ತಿಳಿದು ಬಂದಿದೆ. ಜೊತೆಗೆ ಬೆತ್ತಲೆ ಫೋಟೋ, ವಿಡಿಯೋ ವೈರಲ್ ಮಾಡುವ ಬೆದರಿಕೆ ಇದ್ದು, ಇದರಿಂದ ಈತ ಆತ್ಮಹತ್ಯೆಯ ದಾರಿ ಹಿಡಿದಿರುವ ಸಂದೇಹ ಸಹ ವ್ಯಕ್ತವಾಗಿದೆ.

ಸೋಲದೇವನಹಳ್ಳಿ ಠಾಣೆಯಲ್ಲಿ ಬಿಎನ್‌ಎಸ್ 106 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top