ಧರ್ಮಗಳ ನಡುವೆ ದ್ವೇಷ ಹರಡುವ ಹೇಳಿಕೆ: SDPI ನಾಯಕ ರಿಯಾಜ್ ಕಡಂಬು ಬಂಧನ

ಉಡುಪಿ: ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಧರ್ಮ ಧರ್ಮಗಳ ನಡುವೆ ದ್ವೇಷ ಹರಡುವ ಕೆಲಸ ಮಾಡಿರುವ ಆರೋಪದಲ್ಲಿ SDPI ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಡುಪಿಯಲ್ಲಿ ದೂರು ದಾಖಲಾಗಿತ್ತು‌. ಆರೋಪಿ ರಿಯಾಜ್ ಜಾಮೀನು ನಿಯಮಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಆತನನ್ನು ಉಡುಪಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆಜ್ಞೆ ನೀಡಿದೆ.

ಆರೋಪಿ ರಿಯಾಜ್ ಸಾಮಾಜಿಕ ಸಾಮರಸ್ಯ ಕದಡುವ ಆಧಾರ ರಹಿತ ಹೇಳಿಕೆಗಳನ್ನು ನೀಡುತ್ತಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನಗರ ಪೊಲೀಸರಿಗೆ ತಿಳಿದು ಬಂದಿತ್ತು. ಸಾರ್ವಜನಿಕರಲ್ಲಿ ಕೋಮು ಸಂಘರ್ಷ ಏರ್ಪಡುವಂತೆ, ಗಲಭೆ ಗೊಂದಲಗಳಿಗೆ ಆಸ್ಪದ ನೀಡುವಂತೆ ಮಾತನಾಡಿದ ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು.





















































 
 
error: Content is protected !!
Scroll to Top