ಕೊಡಗು: ದಕ್ಷಿಣಕನ್ನಡ ಕೊಡಗು ಅಭಿವೃದ್ಧಿ ಸಂಘ ರಿ ಸುಳ್ಳ್ಯ ಇದರ ಸಂಘದ ಕಾರ್ಯನಿರ್ವಾಹಕ ಸದಸ್ಯರ ಸಭೆ ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಪೈಕೇರ ಮನೋಹರ ಮಾದಪ್ಪನವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ಸುಳ್ಳ್ಯದ ನಿವೇಶನ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿದ್ದು ದೈವಜ್ಞರ ಮೂಲಕ ಚಿಂತನೆ ನಡೆಸಿ ಮುಂದಿನ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ಎಂದು ನಿರ್ಣಯಿಸಲಾಯಿತು. ನಿವೇಶನವನ್ನು ಸ್ವಚ್ಛಗೊಳಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ದುಗ್ಗಳ ಕಪಿಲ ಕುಮಾರ್ ಬಿ. ಡಿ,ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಹಿರಿಯ ನಿರ್ದೇಶಕರಾದ ನವೀನ್ ರಿಷಿತ್ ಮಾಡಯ್ಯ, ಅಶೋಕ್ ಶೇಡಿ, ಕುಂತಜೆ ಗಣೇಶ್, ಕೊಂಬರನ ರೋಷನ್, ಬಾಲಡಿ ಮನೋಜ್ ಕುಮಾರ್ ಅಂಬೇಕಲ್ಲು, ಗೌರವ ಸಲಹೆಗರರಾದ ಪಂಜಿಪಲ್ಲ ವೆಂಕಪ್ಪ, ಸಲಹಾ ಸಮಿತಿಯ ಸದಸ್ಯರಾದ ವಸಂತ ವೀರಮಂಗಳ, ಮುರಳಿಧರ್ ಕೆ ಎಲ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ ಸ್ವಾಗತಿಸಿ ಸಭೆ ನಿರ್ವಹಿಸಿದರು.
























