ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರಿಂದ ಮನವಿ ಸಲ್ಲಿಕೆ
ಕಡಬ: ತಾಲೂಕು ವ್ಯಾಪ್ತಿಯ ಕೊಯಿಲ, ರಾಮಕುಂಜ, ಆಲಂತಾಯ, ಹಳೆನೇರಂಕಿ, ಗೋಳಿತೊಟ್ಟು ಮತ್ತು ಪುತ್ತೂರು ತಾಲೂಕಿನ ಬಜತ್ತೂರು ಹಿರೇಬಂಡಾಡಿ ಗ್ರಾಮಗಳಿಗೆ ವಿದ್ಯುತ್ ಲೋ ವೋಲ್ಟೇಜ್ ಸಮಸ್ಯೆ ಇದ್ದ ಕಾರಣ ಕೊಯ್ಲದಲ್ಲಿ ಹೊಸದಾಗಿ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದ್ದು, ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸುವಂತೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿರುವ MRF ಘಟಕಗಳಿಗೆ ನಿರಂತರ ವಿದ್ಯುತ್ ಪೂರೈಸುವಂತೆ ಚರ್ಚಿಸಿ ಈ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳಾ ರೆಸೊರ್ಸ್ ಸಂಸ್ಥೆಯ MD ದಿಲ್ ರಾಜ್ ಆಳ್ವ ರವರು ಉಪಸ್ಥಿತರಿದ್ದರು.
























