ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟಕ್ಕೆ ಚಾಲನೆ

ಪುತ್ತೂರು: ಸಮಾಜಮುಖಿ ಚಿಂತನೆಯೊಂದಿಗೆ ಸ್ಪಂದನೆ ನೀಡುವ ಮುಳಿಯ ಸಂಸ್ಥೆಯು ಗ್ರಾಹಕರ ನಂಬಿಕೆ, ವಿಶ್ವಾಸದ ನೆಲೆ ಎಂದು ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.


ಪುತ್ತೂರು ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಆಭರಣ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿರುವ ಮುಳಿಯ ಸಂಸ್ಥೆ ಇನ್ನಿತರ ಕ್ಷೇತ್ರಗಳಲ್ಲಿಯು ತನ್ನಭಾಪು ತೋರಿಸಿದೆ. ಧಾರ್ಮಿಕ, ರಿಯಲ್ ಎಸ್ಟೇಟ್ ಹೀಗೆ ತನ್ನ ಇರುವಿಕೆಯ ಕ್ಷೇತ್ರಗಳಲ್ಲಿ ಜನರ ನಂಬಿಕೆಗೆ ಪಾತ್ರವಾಗಿದ್ದು ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದರು.

ಸಂತ ಫಿಲೋಮಿನಾ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ಮಾತನಾಡಿ, ವಜ್ರಾಭರಣ ಶುದ್ಧತೆ, ನಂಬಿಕೆಯ ಸಂಕೇತದ ಜತೆಗೆ ಸಾಮರಸ್ಯದ ಬೆಳಕು ಕೂಡ ಆಗಿದೆ. ಧಾರ್ಮಿಕ ಪಾವಿತ್ರವನ್ನು ಹೊಂದಿದೆ. ಮುಳಿಯದಲ್ಲಿ ವಜ್ರಾಭರಣ ಪ್ರದರ್ಶನ, ಮಾರಾಟ ಗ್ರಾಹಕರಿಗೆ ಸಿಕ್ಕ ಬಹುದೊಡ್ಡ ಅವಕಾಶ, ಏಕೆಂದರೆ ಗುಣಮಟ್ಟ ವಿಶ್ವಾಸಾರ್ಹತೆಗೆ ಮುಳಿಯ ಹೆಸರುವಾಸಿ ಎಂದರು.
ಸಂಸ್ಥೆಯ ಎಂ.ಡಿ. ಕೃಷ್ಣ ನಾರಾಯಣ ಮುಳಿಯ ಮಾತನಾಡಿ, 81 ವರ್ಷಗಳ ಇತಿಹಾಸ ಹೊಂದಿರುವ ಮುಳಿಯ ಆಭರಣ ಸಂಸ್ಥೆಯು 2002 ರಿಂದ ವಜ್ರಾಭರಣ ಪ್ರದರ್ಶನ ಮಾರಾಟ ಉತ್ಸವ ಹಮ್ಮಿಕೊಂಡಿದೆ. ಈ ಬಾರಿ ವಿಶಿಷ್ಟ ರೀತಿಯ ಸಂಗ್ರಹ ಇದೆ. ದೇಶದಲ್ಲೇ ವಿಶೇಷ ಎಂಬಂತೆ ಡೈಮಂಡ್ ಟೆಸ್ಟಿಂಗ್ ಯಂತ್ರವೂ ಇಲ್ಲಿ ಇದೆ. ವಜ್ರಾಭರಣದ ಮೌಲ್ಯದ ಬಗ್ಗೆ ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡುವ ಸಿಬಂದಿ ವರ್ಗ ಇಲ್ಲಿನ ವಿಶೇಷ ಎಂದರು.





















































 
 

ಜಯಶ್ರೀ ಪಂಜಿಗುಡ್ಡೆ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು. ಫೋರ್ ಮ್ಯಾನೇಜರ್ ಯತೀಶ್ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು.ಸಿಬಂದಿಅಶ್ವಿನಿನಿರೂಪಿಸಿದರು. ಪ್ರಥಮ ಗ್ರಾಹಕ ಸತೀಶ್ ದಂಪತಿಗೆ ವಜ್ರಾಭರಭಣ ಹಸ್ತಾಂತರಿಸಲಾಯಿತು.

error: Content is protected !!
Scroll to Top