ಭಾಷಾ ವಿಭಜನೆ ಜನರ ಮಧ್ಯೆ ಸಂವಹನಕ್ಕೆ ಅಡ್ಡಿ ಮಾಡುತ್ತದೆ
ಮುಂಬೈ: ಭಾಷಾ ವಿಷಯದಲ್ಲಿ ನಾವು ಸಮಾಜವನ್ನು ಬೇರ್ಪಡಿಸಬಾರದು. ದೇಶದ ಏಕತೆಯನ್ನು ನಾವು ಕಾಪಾಡಬೇಕು ಎಂದು ಸಂಸದೆ ಕಂಗನಾ ರಾಣಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತವನ್ನು ವಿಭಜಿಸುವ ಶಕ್ತಿಗಳಿಂದ ನಾವು ಅಂತರ ಕಾಪಾಡಿಕೊಳ್ಳಬೇಕು .ಭಾರತೀಯರು ವಿಭಿನ್ನ ಕ್ರಮಗಳ ಮೂಲಕ ಪರಸ್ಪರ ಸಂವಹನ ನಡೆಸಲು ಪ್ರಯತ್ನ ಪಡುತ್ತಾರೆ. ಭಾಷೆಗೆ ಸಂಬಂಧಿಸಿದ ಹಾಗೆ ಬೇರ್ಪಡಿಸಲು ಹೊರಟರೆ ಅದು ಅವರ ಪ್ರಯತ್ನಗಳಿಗೆ ಅಡ್ಡಿ ಮಾಡಿದ ಹಾಗಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿಗೆ ಪ್ರವಾಸೋದ್ಯಮಕ್ಕಾಗಿ ಹಲವಾರು ಜನರು ಆಗಮಿಸುತ್ತಾರೆ. ಆಗ ಭಾಷಾ ಬೇರ್ಪಡಿಕೆ ಸಮಸ್ಯೆ ಸೃಷ್ಟಿಸುತ್ತದೆ. ದೇಶದ ಏಕತೆಯನ್ನು ಕಾಪಾಡಿಕೊಳ್ಳಲು ಭಾಷೆ ಮುಖ್ಯವಾಗಿದ್ದು, ನಾವು ಭಾಷಾ ವಿಷಯದಲ್ಲಿ ಜನರನ್ನು ಬೇರೆ ಬೇರೆ ಮಾಡಬಾರದು ಎಂದು ಹೇಳಿದ್ದಾರೆ.
























