ಲಕ್ನೋ : ಉತ್ತರ ಪ್ರದೇಶದ ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿ ನೋವಿನಲ್ಲಿ ನರಳಾಡುತಿದ್ದು , ಮೇಜರ್ ಡಾ. ರೋಹಿತ್ ಬಚ್ ವಾಲ ಎಂಬ ಸೇನಾ ವೈದ್ಯ ಹೆರಿಗೆ ಮಾಡಿಸಿದ ಘಟನೆ ಶನಿವಾರ ನಡೆದಿದೆ .
ಪನ್ವೇಲ್ – ಗೋರಖ್ ಪುರ ಎಕ್ಸ್ ಪ್ರೆಸ್ಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಯೋರ್ವರಿಗೆ ಹೆರಿಗೆ ನೋವು ಪ್ರಾರಂಭವಾಗಿದ್ದು , ಝಾನ್ಸಿ ನಿಲ್ದಾಣದಲ್ಲಿ ಇಳಿದಿದ್ದಾರೆ . ಆಕೆಯ ಸ್ಥಿತಿ ಕಂಡು ರೈಲ್ವೆಯ ಮಹಿಳಾ ಸಿಬ್ಬಂದಿ ಸಹಾಯಕ್ಕೆ ಬಂದು ವೀಲ್‌ಚೇರ್ ನಲ್ಲಿ ಕರೆದೊಯ್ಯುತ್ತಿದ್ದರು.
ಈ ವೇಳೆ ಓರ್ವ ಸೇನಾ ವೈದ್ಯ ಹೈದರಬಾದ್ ರೈಲಿಗಾಗಿ ಕಾಯುತ್ತಿದ್ದು , ಆ ಘಟನೆಯನ್ನು ಕಂಡು ಅಲ್ಲಿಗೆ ಧಾವಿಸಿ , ತುರ್ತು ಪರಿಸ್ಥಿತಿಯನ್ನು ಅರಿತರು . ನಂತರ ಸ್ಥಳದಲ್ಲೇ ಲಭ್ಯವಿದ್ದ ಪುಟ್ಟ ಚಾಕು , ಹೇರ್ ಪಿನ್ ಬಳಸಿ ತಾಯಿ ಮಗುವಿನ ಜೀವ ರಕ್ಷಿಸಿದ್ದಾರೆ . ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ .
























