ವಿಶ್ವ ವಿಖ್ಯಾತ  ಹಂಪಿ ಉತ್ಸವದಲ್ಲಿ ಡಾ. ಅನುರಾಧಾ ಕುರುಂಜಿಯವರಿಂದ ಪ್ರಬಂಧ ಮಂಡನೆ

ಸುಳ್ಯ : ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವು ಫೆಬ್ರುವರಿ 28 ರಿಂದ ಮಾರ್ಚ್ 2 ರವರೆಗೆ ನಡೆಯುತ್ತಿದ್ದು, ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡ ಮಹಿಳಾ ವಿಚಾರ ಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಬಂಧ ಮಂಡನೆ ಮಾಡಿದರು.

ಮಹಿಳಾ ಚಿಂತಕಿ  ಶೈಲಜ ಹಿರೇಮಠ್ ಉದ್ಘಾಟಿಸಿದ , ಸಾಹಿತಿಗಳಾದ ಎಸ್ ವಿ ಪಾಟೀಲ್ ಅಧ್ಯಕ್ಷತೆ ವಪಿಸಿದ್ದ  ವಿಚಾರ ಗೋಷ್ಠಿಯಲ್ಲಿ  ಡಾ. ಅನುರಾಧಾ ಕುರುಂಜಿಯವರು “ವಿಜಯನಗರ ಕಾಲದ ಮಹಿಳೆ ಮತ್ತು ಮನೋರಂಜನಾ ಕ್ರೀಡೆಗಳು” ಎಂಬ ವಿಷಯದ ಕುರಿತು  ಪ್ರಬಂಧ ಮಂಡಿಸಿದ್ದರು.

ಬಹಳಷ್ಟು ವಿದ್ವಾಂಸರುಗಳನ್ನೊಳಗೊಂಡಂತೆ ಲಕ್ಷೋಪಾದಿಯಲ್ಲಿ ಜನರು ಆಗಮಿಸುವ ಈ ಹಂಪಿ ಉತ್ಸವವು ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರು ಸೃಷ್ಟಿಸುವ ಉತ್ಸವವಾಗಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top