ರಾಷ್ಟ್ರಪತಿಗೆ ಅವಮಾನ : ಸೋನಿಯಾ ಗಾಂಧಿ ವಿರುದ್ಧ ದೂರು

ಹೊಸದಿಲ್ಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಡಪಾಯಿ ಮಹಿಳೆ ಎಂದು ಕರೆದು ಹೀಯಾಳಿಸಿರುವ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ.

ಬಿಹಾರದ ಮುಜಾಫರ್‌ನಗರದ ವಕೀಲ ಸುಧೀರ್‌ ಓಜಾ ಎಂಬವರು ದೇಶದ ಪರಮೋಚ್ಛ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಕೀಳು ಪದಗಳಲ್ಲಿ ಟೀಕೆ ಮಾಡಿದ ಸೋನಿಯಾ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಬೇಕೆಂದು ಆಗ್ರಹಿಸಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕ ವಾಡ್ರಾ ಗಾಂಧಿಯನ್ನು ಸಹ ಆರೋಪಿಗಳು ಎಂದು ಹೆಸರಿಸಲಾಗಿದೆ.

ಜ.31ರಂದು ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಜೆಟ್‌ ಅಧಿವೇಶನದ ಭಾಷಣ ಮಾಡಿದ್ದರು. ಈ ಬಗ್ಗೆ ಸಂಸತ್ತಿನ ಹೊರಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಸೋನಿಯಾ ಗಾಂಧಿ ಇಂಗ್ಲೀಷಿನಲ್ಲಿ ಪೂರ್‌ ಲೇಡಿ ಎಂದು ಅವಮಾನಕಾರಿ ಪದ ಬಳಕೆ ಮಾಡಿ ಟೀಕೆ ಮಾಡಿದ್ದರು. ನಂತರ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ವಾಡ್ರಾ ಗಾಂಧಿ ಇದನ್ನು ಸಮರ್ಥಿಸಿಕೊಂಡಿದ್ದರು. ಫೆ.10ರಂದು ನ್ಯಾಯಾಲಯದಲ್ಲಿ ಈ ದೂರು ವಿಚಾರಣೆಗೆ ಬರಲಿದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top