ಪ್ರವಾಸಕ್ಕೆಂದು ತೆರಳಿದ ಬಸ್ ಅಪಘಾತದಲ್ಲಿ ಚಿಕಿತ್ಸೆ ಫಲಿಸಿದೆ ಮಹಿಳೆ ಮೃತ್ಯು

ಬಂಟ್ವಾಳ : ಜೋಗ ಜಲಪಾತ ಪ್ರವಾಸಕ್ಕೆಂದು ತೆರಳಿದ್ದ ಬಸ್‍ ಅಪಘಾತಕ್ಕೀಡಾಗಿತ್ತು, ಅಪಘಾತದಲ್ಲಿ ಗಾಯಗೊಂಡ ಪ್ರವಾಸಿಗರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿದ್ದ ಮಹಿಳೆಯೋರ್ವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಶಂಭೂರು ಮುಂಡಜೋರ ನಿವಾಸಿ ಭಾರತಿ (55) ಎಂದು ಗುರುತಿಸಲಾಗಿದೆ.

ಡಿ.15 ರಂದು ಬಂಟ್ವಾಳ ತಾಲೂಕಿನ ಶಂಭೂರು ಶ್ರೀ ಸಾಯಿ ಮಂದಿರದಿಂದ ಸುಮಾರು 55 ಮಂದಿ ಖಾಸಗಿ ಬಸ್ ನಲ್ಲಿ ಪ್ರವಾಸಕ್ಕೆಂದು ಜೋಗಜಲಪಾತಕ್ಕೆ ತೆರಳಿದ್ದರು. ಶಂಭೂರು, ಬಿಸಿರೋಡು,ಪಾಣೆಮಂಗಳೂರು ಹಾಗೂ ಮಂಗಳೂರಿನಿಂದ ಬಸ್ ಮೂಲಕ ಪ್ರವಾಸಕ್ಕೆ ಹೋಗಿದ್ದರು. ಜೋಗ ಜಲಪಾತ ತಲಪುವ ಸ್ವಲ್ಪ ದೂರವೇ ಬಸ್‌ನ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾಗಿದೆ.





















































 
 

ಬಸ್‍ನಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿ ಇದ್ದು, ಗಂಭೀರವಾಗಿ ಗಾಯವಾಗಿದೆ. ಅಪಘಾತಕ್ಕೀಡಾದವರಿಗೆ  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರು ವಿಶೇಷ ಕಾಳಜಿ ವಹಿಸಿ ಸಾಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆತರಲಾಗಿತ್ತು. ಶಾಸಕರ ಸೂಚನೆಯಂತೆ ಎ.ಜೆ.ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡ ಎಲ್ಲರನ್ನು ಚಿಕಿತ್ಸೆ ನೀಡಲು ದಾಖಲು ಮಾಡಲಾಗಿತ್ತು. ಆದರೆ ಕೈ ಹಾಗೂ ಎದೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಭಾರತಿ ಸುಮಾರು 15 ದಿನಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top