ಲಖನೌ : ಯುವಕನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹೋಟೆಲಿನ ಕೊಠಡಿಯಲ್ಲಿ ಕೂಡಿ ಹಾಕಿ ಸಾಯಿಸಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಲಖನೌನ ನಾಕಾ ಪ್ರದೇಶದಲ್ಲಿರುವ ಹೋಟೆಲ್‌ನಲ್ಲಿ ಇಂದು ಬೆಳಗ್ಗೆ ಒಂದೇ ಕುಟುಂಬದ ಐವರ ಮೃತದೇಹಗಳು ಕೊಲೆಯಲ್ಲಿ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಲಖನೌದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ ತಿಳಿಸಿದ್ದಾರೆ.
ಆರೋಪಿಯನ್ನು ಆರ್ಷದ್ (24) ಎಂದು ಗುರುತಿಸಲಾಗಿದೆ. ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಹತ್ಯೆಗೈದಿದ್ದಾನೆ. ಭೀಕರ ಕೃತ್ಯದ ನಂತರ, ಸ್ಥಳೀಯ ಪೊಲೀಸರು ಅಪರಾಧದ ಸ್ಥಳದಿಂದಲೇ ಆತನನ್ನು ತ್ವರಿತವಾಗಿ ಬಂಧಿಸಿದ್ದಾರೆ. ಹತ್ಯೆಗೀಡಾದವರನ್ನು ಆಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ. ಎಲ್ಲರೂ ಆರ್ಷದ್‌ನ ಸಹೋದರಿಯರು. ಐದನೆಯವರು ಆರೋಪಿಯ ತಾಯಿ ಅಸ್ಮಾ ಎಂದು ಪೊಲೀಸರು ತಿಳಿಸಿದ್ದಾರೆ
25 ವರ್ಷದ ಆರ್ಷದ್ ಆಗ್ರಾ ಮೂಲದವನಾಗಿದ್ದು, ಕೌಟುಂಬಿಕ ಕಲಹಗಳಿಂದಾಗಿ ಆತ ದುಷ್ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಕುಟುಂಬ ಕಳೆದ ಡಿ.30ರಿಂದ ಹೋಟೆಲ್‌ನಲ್ಲಿ ತಂಗಿತ್ತು ಎನ್ನಲಾಗಿದೆ.
























