ಪುತ್ತೂರು: ಜಿಟಿಜಿಟಿ ಮಳೆ ಸುರಿಯಲು ಆರಂಭವಾಗುತ್ತಿದ್ದಂತೆ ಪುತ್ತೂರು ಪೇಟೆಯ ಮುಖ್ಯರಸ್ತೆಯಲ್ಲಿ ಲಘು ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆಯಿತು.
ಕಲ್ಲಾರೆಯಿಂದ ಅರುಣಾ ಥಿಯೇಟರ್ ನಡುವಿನ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ವಾಹನಗಳು ಹಾರನ್ ಮೊಳಗಿಸುತ್ತಾ, ತೆವಳುತ್ತಾ ಸಾಗುವಂತಾಯಿತು.
ಪುತ್ತೂರಿನಲ್ಲಿ ಮಂಗಳವಾರ ಸಂಜೆ ಮಳೆ ಸುರಿಯಿತು. ಅಷ್ಟರಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ಅದರಲ್ಲೂ ಪುತ್ತೂರಿನಿಂದ ದರ್ಬೆ ಕಡೆಗೆ ಸಾಗುವ ಒಂದು ರಸ್ತೆಯಲ್ಲಿ ವಾಹನಗಳ ಸರತಿ ಸಾಲು ಕಂಡುಬಂದಿತು.
























