ವಿಟ್ಲ: 400 ಕೆ.ವಿ. ಹೈಟೆನ್ಷನ್ ಮಾರ್ಗದ ಕಾಮಗಾರಿಗೆ ಮುಂದಾಗುತ್ತಿದ್ದ ಘಟನೆಯನ್ನು ಪುಣಚ ಗ್ರಾಮಸ್ಥರು ವಿರೋಧಿಸಿದ್ದು, ಸ್ಥಳಕ್ಕೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.

ಅಧಿಕಾರಿಗಳ ಜೊತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಯಾವುದೇ ಕಾರಣಕ್ಕೂ 400 ಕೆ.ವಿ. ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ. ಆದರೆ ಶಾಂತಿ – ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದರು.

ರೈತರ ಜೊತೆ ಮಾತಕತೆ ನಡೆಸಿದ ಪುತ್ತಿಲ ಅವರು, ಯಾವಾಗಲೂ ರೈತರ ಜೊತೆ ನಾನಿದ್ದೇನೆ ಎಂದು ಭರವಸೆ ತುಂಬಿದರು.
400 ಕೆ.ವಿ. ವಿದ್ಯುತ್ ವಿರೋಧಿ ಹೋರಾಟ ಸಮಿತಿ ವಿಟ್ಲದ ಅಧ್ಯಕ್ಷ ರಾಜೀವ ಗೌಡ, ಸಂಜೀವ ಗೌಡ ಒಕ್ಕೆತ್ತೂರು, ಚಿತ್ತರಂಜನ್ ಮಂಗಿಲಪದವು, ರೋಹಿತಾಶ್ವ ಮಂಗಿಲಪದವು, ದಾಮೋದರ ಗೌಡ ಒಕ್ಕೆತ್ತೂರು, ಅಬ್ಬಾಸ್ ಪುಣಚ, ಪುಣಚ ಗ್ರಾಮ ಪಂಚಾಯತ್ ಸದಸ್ಯ ಅಶೋಕ್, ಭಾಸ್ಕರ್ ಉಪಾಧ್ಯಾಯ ಪುಣಚ, ಪಾರ್ಥ ಸಾರಥಿ ವಾರಣಾಸಿ ಹಾಗೂ ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಸುಧೀರ್ ಕುಮಾರ್ ಶೆಟ್ಟಿ ಮೊಡಂಬೈಲ್, ಭೀಮ ಭಟ್, ರಘುರಾಮ್ ಶೆಟ್ಟಿ ವಿಟ್ಲ, ಶರತ್ ಎನ್.ಎಸ್., ನವೀನ್ ಕುಮಾರ್ ಕಾಶೀಮಠ ಮೊದಲಾದವರು ಉಪಸ್ಥಿತರಿದ್ದರು.
























