ಪುತ್ತೂರು: SSLC ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ಉತ್ತಮ್ ಜಿ. 624 ಅಂಕ ಪಡೆದುಕೊಂಡಿದ್ದು, ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಉತ್ತಮ್ ಅವರಿಗೆ ಸಮಾಜ ವಿಜ್ಞಾನದಲ್ಲಿ ಈ ಹಿಂದೆ 98 ಅಂಕ ಗಳಿಸಿದ್ದರು. ಇದೀಗ ಮರುಮೌಲ್ಯಮಾಪನದಲ್ಲಿ 99 ಅಂಕ ಗಳಿಸುವ ಮೂಲಕ 624 ಅಂಕ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ತಿಳಿಸಿದ್ದಾರೆ.
ಇವರು ಕಾಣಿಯೂರು ಗ್ರಾಮದ ಗುಂಡಿಗದ್ದೆ ಪದ್ಮನಾಭ ಜಿ. ಹಾಗೂ ಹೇಮಾವತಿ ದಂಪತಿ ಪುತ್ರ.
























