ಸುಲಲಿತವಾಗಿ ಇಂಗ್ಲೀಷ್ ಮಾತನಾಡಬೇಕೇ? ಪ್ರೇರಣಾದಲ್ಲಿ ಶೀಘ್ರ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಅನ್ನು ಆರಂಭಿಸಲಾಗುತ್ತಿದೆ.

ಸುಲಲಿತವಾಗಿ ಇಂಗ್ಲೀಷ್ ಬಲ್ಲವರಾಗಿದ್ದರೆ, ಪ್ರಪಂಚದ ಯಾವುದೇ ಮೂಲೆಗಾದರೂ ಹೋಗಿ ವ್ಯವಹರಿಸಬಹುದು. ಆದರೆ ಗ್ರಾಮೀಣ ಭಾಗದವರಿಗೆ ಇಂಗ್ಲೀಷ್ ಎಂದರೆ ತುಸು ಕಷ್ಟವೇ. ಇಂತಹ ಮನಸ್ಥಿತಿಯನ್ನು ದೂರಮಾಡಿ, ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ.

ಆಧುನಿಕ ಜಗತ್ತಿನ ಸ್ಪರ್ಧೆಗೆ ಸರಿಯಾಗಿ ಮಹಾನಗರಗಳ ವಿದ್ಯಾರ್ಥಿಗಳು ಸಜ್ಜುಗೊಳ್ಳುತ್ತಿದ್ದಾರೆ. ಅಂದರೆ ಅವರಿಗೆ ಪೂರಕವಾದ ವಾತಾವರಣವೂ ಮಹಾನಗರಗಳಲ್ಲೇ ಸಿಗುತ್ತಿವೆ. ಆದರೆ ಪುಟ್ಟ ಪಟ್ಟಣ ಅಥವಾ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ಮೂಲಸೌಲಭ್ಯ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅಗತ್ಯವಾದ ಮೂಲಶಿಕ್ಷಣ ಮರೀಚಿಕೆಯಾಗಿದೆ. ಈ ಕೊರತೆಯನ್ನು ನೀಗಿಸಿ, ಮಹಾನಗರಗಳ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಬೇಕು ಎನ್ನುವ ಸದುದ್ದೇಶದಿಂದ ಪ್ರೇರಣಾ ಸಂಸ್ಥೆಯಲ್ಲೇ ಶೀಘ್ರದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ತಕ್ಷಣ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಮಾಹಿತಿಗೆ 8904877721, 7204977721, 08251-200721 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top