ಪುತ್ತೂರು: ದೈವಸ್ಥಾನದ ಹೆಸರು ಹೇಳಿ ಅಮಾಯಕರ ಮೇಲೆ ಹಲ್ಲೆ ಹಿಂದುತ್ವವೇ ? ಹೆಣ್ಣು ಮಕ್ಕಳ ಮೇಲ ಕೊಲೆ ಯತ್ನ ನಡೆಸಿರುವುದು ಹಿಂದುತ್ವ ಆಧಾರದ ಮಹಿಳೆಯರ ರಕ್ಷಣೆಯೇ ? ಇಂತಹಾ ಗೂಂಡಾ ವ್ಯಕ್ತಿಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗದಂತೆ ಪ್ರಜ್ಞಾವಂತ ಮತದಾರರು ಚಿಂತಿಸಬೇಕಾಗಿದೆ ಎಂದು ಮುಂಡೂರು ಗ್ರಾಮದ ಮುಳಾರು ನಿವಾಸಿ ರವೀಂದ್ರ ಅವರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಅವರ ಮೇಲೆ ಕಿಡಿ ಕಾರಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಕೃಷಿಕನಾಗಿದ್ದು, ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯುವ ಸ್ಥಳದ ಪಕ್ಕದಲ್ಲೇ ನನ್ನ ಪಟ್ಟಾ ಸ್ಥಳವಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಕಳೆದ ಡಿಸೆಂಬರ್‍ನಲ್ಲಿ ರಾತ್ರಿ ಹೊತ್ತು ಜೆಬಿಸಿ ತಂದು ನಮ್ಮ ಜಮೀನಿಗೆ ನುಗ್ಗಿ ಅತಿಕ್ರಮ ಪ್ರವೇಶ ಮಾಡಿರುವುದಲ್ಲದೆ ನನ್ನ ಹೆಣ್ಣು ಮಕ್ಕಳ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನಿಸಿರುತ್ತಾರೆ. ಈ ಕುರಿತು ನಾನು ಗ್ರಾಮಾಂತರ ಠಾಣೆಗೆ ಐದು ಬಾರಿ ದೂರು ನೀಡಿದ್ದು, ಯಾವುದೇ ಕೇಸು ದಾಖಲಾಗದ ಹಿನ್ನಲೆಯಲ್ಲಿ ಕೋರ್ಟಿನ ಮೂಲಕ ಕೇಸು ದಾಖಲಾಗುವಂತೆ ಆಗಿದೆ ಎಂದು ಹೇಳಿದರು.
ಇಂತಹಾ ವ್ಯಕ್ತಿಗೆ ಜನಪ್ರತಿನಿಧಿಯಾಗಿ ಅಧಿಕಾರ ಸಿ್ಕಿದರೆ ನನ್ನಂತಹ ಸಾಮಾನ್ಯರನ್ನು ಬದುಕಲು ಬಿಟ್ಟಾರೆಯೇ? ಎಂದು ತಮ್ಮ ಅಳಲನ್ನು ತೋಡಿಕೊಂಡರು.
























