ಪಕ್ಷೇತರ ಅಭ್ಯರ್ಥಿ ತಾರಾ ಪ್ರಚಾರಕರನ್ನು ಬಳಸಿ ಜಾಹೀರಾತು ನೀಡಿಕೆ : ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗೆ ದೂರು

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರು ಬಿಜೆಪಿ ತಾರಾ ಪ್ರಚಾರಕರನ್ನು  ಬಳಸಿಕೊಂಡು ಕಾನೂನು ಬಾಹಿರ ಪ್ರಚಾರ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದು, ಈ ಕುರಿತು ಬಿಜೆಪಿ ಅಭ್ಯರ್ಥಿ ಏಜೆಂಟ್ ರಾಜೇಶ್ ಬನ್ನೂರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ಈಗಾಗಲೇ ತಾರಾ ಪ್ರಚಾರಕರನ್ನು ಬಳಸಿಕೊಳ್ಳುತ್ತಿರುವ ಕುರಿತು  ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದು, ಮೇ.6 ರಂದು ಯೋಗಿ ಆದಿತ್ಯನಾಥ ಪುತ್ತೂರಿಗೆ ಆಗಮಿಸಲಿದ್ದು, ಅವರಿಗೆ ಸ್ವಾಗತಿಸುವ ಜಾಹೀರಾತು ನೀಡಿರುವುದು ನಮ್ಮ ಗಮನಕ್ಕೆ ಬಂದಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

ಚುನಾವಣಾಧಿಕಾರಿಗಳು ಅವರ ಜಾಹೀರಾತು ನೀಡದಂತೆ ಸಂಬಂಧ ಪಟ್ಟ ಪತ್ರಿಕೆಗಳಿಗೆ ತಕ್ಷಣ ನೋಟೀಸು ಜ್ಯಾರಿ ಮಾಡಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top