ಪುತ್ತೂರು: ಆರ್ಯಾಪು ಗ್ರಾಮದ ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರವನ್ನು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು.
ಏಪ್ರಿಲ್ 26, 27ರಂದು ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಹೋತ್ಸವ ನಡೆಯಲಿದೆ. ಅದೇ ದಿನ ಚಂಡಿಕಾ ಹೋಮ ಸಹಿತ ಮಹಾ ಉತ್ಸವ ನಡೆಯಲಿದೆ. ಶ್ರೀ ಅಮ್ಮನವರ ಬೆಳ್ಳಿಯ ಕತ್ತಿ ಮತ್ತು ಬೆಳ್ಳಿಯ ತ್ರಿಶೂಲ ಸಮರ್ಪಣೆಯೂ ನಡೆಯಲಿದೆ.
ವಾರ್ಷಿಕ ಮಹೋತ್ಸವಕ್ಕೆ ಮೊದಲು ಅಂದರೆ ಏಪ್ರಿಲ್ 20ರಂದು ಗೊನೆ ಮುಹೂರ್ತ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
























