ಸಿಬಿಎಸ್‌ಇ ಪರಿಷ್ಕೃತ ಪಠ್ಯ ಕ್ರಮದಲ್ಲಿ ಮೊಘಲರ ಅಧ್ಯಾಯ ಇಲ್ಲ

ಎನ್‌ಸಿಇಆರ್‌ಟಿ ಪರಿಷ್ಕೃತ ಪಠ್ಯ 2023-24ರಿಂದಲೇ ಜಾರಿ

ದೆಹಲಿ : ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಸಿಇಆರ್‌ಟಿ) 12ನೇ ತರಗತಿಯ ಇತಿಹಾಸ ಪಠ್ಯದಲ್ಲಿ ಮೊಘಲರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕಿದೆ. 2023-24ನೇ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ. ಈ ಸೂಚನೆ ಸಿಬಿಎಸ್‌ಇ ಹಾಗೂ ಎನ್‌ಸಿಇಆರ್‌ಟಿ ಪಠ್ಯಕ್ರಮ ಅನುಸರಿಸುವ ಎಲ್ಲ ರಾಜ್ಯಗಳಿಗೆ ಅನ್ವಯಿಸಲಿದೆ.

ನವೀಕರಿಸಿದ ಪಠ್ಯಕ್ರಮದ ಪ್ರಕಾರ, ಥೀಮ್ಸ್‌ ಆಫ್‌ ಇಂಡಿಯನ್‌ ಹಿಸ್ಟರಿ-ಪಾರ್ಟ್ 2 ಎಂಬ ಇತಿಹಾಸ ಪುಸ್ತಕದಲ್ಲಿ ಅರಸರು ಹಾಗೂ ಚರಿತ್ರೆ- ಮೊಘಲ್‌ ನ್ಯಾಯಾಲಯಗಳು (16 ಹಾಗೂ 17ನೇ ಶತಮಾನ) ಪಾಠವನ್ನು ತೆಗೆದು ಹಾಕಲಾಗಿದೆ. 12ನೇ ತರಗತಿಯ ಸಿವಿಕ್ಸ್‌ ಪುಸ್ತಕದ ವಿಶ್ವ ರಾಜಕೀಯದಲ್ಲಿ ಅಮೆರಿಕ ಪ್ರಾಬಲ್ಯ ಹಾಗೂ ಶೀತಲ ಸಮರದ ಯುಗ ಎಂಬ ಅಧ್ಯಾಯ ಕೈ ಬಿಡಲಾಗಿದೆ. 12ನೇ ತರಗತಿಯ ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜಕೀಯ ಪಠ್ಯಪುಸ್ತಕದಲ್ಲಿ ಇನ್ನು ಮುಂದೆ ಜನಪ್ರಿಯ ಚಳವಳಿಗಳ ಉದಯ ಮತ್ತು ಒಂದು ಪಕ್ಷದ ಪ್ರಾಬಲ್ಯದ ಯುಗ ಪಾಠಗಳು ಇರುವುದಿಲ್ಲ.





















































 
 

11ನೇ ತರಗತಿಯ ಪಠ್ಯಪುಸ್ತಕವನ್ನೂ ಎನ್‌ಸಿಇಆರ್‌ಟಿ ನವೀಕರಿಸಿದೆ. ವಿಶ್ವ ಇತಿಹಾಸದಲ್ಲಿ ನಿರೂಪಣೆಗಳು ಪುಸ್ತಕದಲ್ಲಿ ಸೆಂಟ್ರಲ್‌ ಇಸ್ಲಾಮಿಕ್‌ ಲ್ಯಾಂಡ್, ಸಂಸ್ಕೃತಿಗಳ ಮುಖಾಮುಖಿ ಮತ್ತು ದಿ ಇಂಡಸ್ಟ್ರಿಯಲ್ ರೆವಲ್ಯೂಷನ್‌ ನಂತಹ ಅಧ್ಯಾಯಗಳನ್ನು ತೆಗೆದುಹಾಕಿದೆ. ಇನ್ನು 10ನೇ ತರಗತಿಯ ಪ್ರಜಾಪ್ರಭುತ್ವ ರಾಜಕೀಯ-2 ಪಠ್ಯಪುಸ್ತಕದಿಂದ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ, ಜನಪ್ರಿಯ ಹೋರಾಟಗಳು ಮತ್ತು ಚಳವಳಿ ಮತ್ತು ಪ್ರಜಾಪ್ರಭುತ್ವಕ್ಕೆ ಸವಾಲುಗಳು ಅಧ್ಯಾಯಗಳನ್ನು ತೆಗೆದುಹಾಕಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top