ಪುತ್ತೂರು: ಒಳಮೊಗ್ರು ಗ್ರಾಮದ ಶಾಂತಿವನ ನಿವಾಸಿ ನಾಟಿವೈದ್ಯ ಎಂ.ಎಸ್. ಮುಕುಂದ ಶಾಂತಿವನ (80 ವ.) ಅವರು ಮಾ. 3ರಂದು ಸ್ವಗೃಹದಲ್ಲಿ ನಿಧನರಾದರು.

ಅಸೌಖ್ಯದಿಂದ ಬಳಲುತ್ತಿದ್ದ ಅವರು, ಶಾಸಕ ಸಂಜೀವ ಮಠಂದೂರು ಅವರಲ್ಲಿ ಮಾತನಾಡಬೇಕು ಎಂಬ ತನ್ನ ಆಸೆಯನ್ನು ಮುಂದಿಟ್ಟಿದ್ದರು. ಅದರಂತೆ ಶಾಸಕ ಸಂಜೀವ ಮಠಂದೂರು ಅವರು ಮಾ. 2ರಂದು ಮುಕುಂದ ಶಾಂತಿವನ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದರು. ಮಾ. 3ರಂದು ಬೆಳಿಗ್ಗೆ ಮುಕುಂದ ಶಾಂತಿವನ ಅವರು ಸ್ವಗೃಹದಲ್ಲಿ ನಿಧನರಾದರು. ಶಾಸಕ ಸಂಜೀವ ಮಠಂದೂರು ಸಹಿತ ಅನೇಕ ಗಣ್ಯರು ಮೃತರ ಮನೆಗೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.
ಪಾಪೆಮಜಲು ಶ್ರೀ ಬ್ರಹ್ಮ ಬೈದೇರ್ಕಳ ಗರಡಿಯ ಮೊಕ್ತೇಸರರಾಗಿದ್ದ ಮುಕುಂದ ಶಾಂತಿವನ ಅವರು, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾಗಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿಯಾಗಿ, ಒಳಮೊಗ್ರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಕಾರ್ಯದರ್ಶಿಯಾಗಿ, ಅರಿಯಡ್ಕ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.
ಮೃತರು ಪತ್ನಿ ಪುಷ್ಪಾವತಿ, ಪುತ್ರಿಯರಾದ ಅನಿತಾ, ಆಶಾ, ಅಮಿತಾ, ಪುತ್ರ ಅಶೋಕ ಅವರನ್ನು ಅಗಲಿದ್ದಾರೆ.
























