ಪುತ್ತೂರು: ವಿಟ್ಲ ಪೆರ್ನೆ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟಿನ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕೆದಿಲ ಹಿಂದು ರುದ್ರಭೂಮಿಯ ಸುತ್ತ ಮುತ್ತ ಸ್ವಚ್ಛತೆ ಮೂಲಕ ಶ್ರಮದಾನ ಮಾಡಿದರು.

ರುದ್ರಭೂಮಿಯ ಸುತ್ತಮುತ್ತ ಬೆಳೆದಿರುವ ಗಿಡ ಗಂಟಿಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ ಕಸ ಕಡ್ಡಿಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಅಶ್ಮಿತಾ, ಸೇವಾಪ್ರತಿನಿಧಿ ಜಯಂತಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಜಗದೀಶ, ಶೀನಪ್ಪ, ಗಿರೀಶ್ ಭಾಗವಹಿಸಿದ್ದರು.
























