ವಿದ್ಯಾರ್ಥಿ ಜೀವನದಲ್ಲೇ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ: ಎ. ಬಾಬು ನಾಯ್ಕ

ಪುತ್ತೂರು: ಅಜ್ಜಿನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವಿಟ್ಲ ತಾಲೂಕು ಇವುಗಳ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ಭಜನಾ ತರಬೇತಿ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ -2 ಜಿಲ್ಲಾ ನಿರ್ದೇಶಕ ಎ. ಬಾಬು ನಾಯ್ಕ ಧಾರ್ಮಿಕ ಉಪನ್ಯಾಸ ನೀಡಿದರು. ಜೀವನದಲ್ಲೇ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು. […]

ವಿದ್ಯಾರ್ಥಿ ಜೀವನದಲ್ಲೇ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ: ಎ. ಬಾಬು ನಾಯ್ಕ Read More »

ಬೆಂಗಳೂರಿನಲ್ಲಿ ಕುಮಾರ್ ಪೆರ್ನಾಜೆ – ಸೌಮ್ಯ ದಂಪತಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ

ಸಾಧನೆಗಳ ಸರದಾರನಿಗೆ ಜನತಾ ಕೃಷಿ ರತ್ನ ಪ್ರಶಸ್ತಿ ಪ್ರಧಾನ ಪುತ್ತೂರು: ಜನತಾ ನ್ಯೂಸ್ ಕನ್ನಡ ವತಿಯಿಂದ ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯುನಲ್ಲಿ ಮನರಂಜನೆ ಫ್ಯಾಶನ್ ಶೋ ಮ್ಯೂಸಿಕಲ್ ನೈಟ್ ನೃತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳ ಸರದಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರ ಗಣನೀಯ ಸೇವೆ ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಜನತಾ ಕೃಷಿ ರತ್ನವನ್ನು ಜನತಾ ನ್ಯೂಸ್ ಮ್ಯಾನೇಜಿಂಗ್

ಬೆಂಗಳೂರಿನಲ್ಲಿ ಕುಮಾರ್ ಪೆರ್ನಾಜೆ – ಸೌಮ್ಯ ದಂಪತಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ Read More »

ಲಾರಿ – ಬೈಕ್ ನಡುವೆ ಅಪಘಾತ: ಸವಾರ ಸಾವು, ಸಹಸವಾರನಿಗೆ ಗಾಯ

ಉಡುಪಿ: ಲಾರಿ ಮತ್ತು ಬೈಕ್ ಮಧ್ಯೆ ಅಪಘಾತ ನಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕಟಪಾಡಿಯ ಕಲ್ಲಾಪು ಸಮೀಪ ನಡೆದಿದೆ. ಮೃತನನ್ನು ಕಟಪಾಡಿ ಸರ್ಕಾರಿ ಗುಡ್ಡೆ ನಿವಾಸಿ ಭೀಮಪ್ಪ ಹುನ್ನಳ್ಳಿ ಎಂದು ಗುರುತಿಸಲಾಗಿದೆ. ಇವರು ಮೂಲತಃ ಬಾಗಲಕೋಟೆಯ ಹನಗುಂದದವರಾಗಿದ್ದಾರೆ. ಸಹ ಸವಾರ ಕಟಪಾಡಿ ನಾಯ್ಕರ್‌ತೋಟದ ಸಾಗರ್ ಶೆಣೈ ಗಾಯಗೊಂಡಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯೇ ‌ಕಾರಣ ಎಂದು ತಿಳಿದು ಬಂದಿದೆ. ಕಾಪು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಲಾರಿ – ಬೈಕ್ ನಡುವೆ ಅಪಘಾತ: ಸವಾರ ಸಾವು, ಸಹಸವಾರನಿಗೆ ಗಾಯ Read More »

ಭಾರಿ ಗಾಳಿ ಮಳೆ : ಕಾರಿನ ಮೇಲೆ ಬಿದ್ದ ಮರ

ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಅಪಾರ ಹಾನಿ ಬೆಳ್ತಂಗಡಿ: ಬೆಳ್ತಂಗಡಿಯ ಎಲ್ಲೆಡೆ ಸೋಮವಾರ ಸಂಜೆ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದು ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲಿ ರಾಮಕ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಈ ಪ್ರದೇಶದ ಇನ್ನೂ ನಾಲ್ಕು

ಭಾರಿ ಗಾಳಿ ಮಳೆ : ಕಾರಿನ ಮೇಲೆ ಬಿದ್ದ ಮರ Read More »

ಅಮೆರಿಕ-ಇರಾನ್‌ ಶಾಂತಿ ಮಾತುಕತೆ ಇನ್ನೂ ಅತಂತ್ರ

ನಾಳೆಗೆ ಮುಕ್ತಾಯವಾಗಲಿದೆ ತಾತ್ಕಾಲಿಕ ಕದನ ವಿರಾಮ ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಎರಡನೇ ಸುತ್ತಿನ ಸಮರ ವಿರಾಮ ಮಾತುಕತೆ ವಿಚಾರ ಇನ್ನೂ ಅತಂತ್ರವಾಗಿಯೇ ಮುಂದುವರಿದಿದೆ. ನಾವು ಪಾಕಿಸ್ತಾನಕ್ಕೆ ಹೋಗುತ್ತಿದ್ದೇವೆ ಎಂದು ಅಮೆರಿಕ ಹೇಳಿದರೆ, ಇತ್ತ ಇರಾನ್ ನಾವು ಹೋಗಲ್ಲ ಎಂದು ಹೇಳುತ್ತಿದೆ. ಇದರ ನಡುವೆಯೇ ಇಸ್ಲಾಮಾಬಾದ್‌ನಲ್ಲಿ ಮಾತ್ರ ಮಾತುಕತೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಘೋಷಿಸಿರುವ ತಾತಾಕಲಿಕ ಕದನ ವಿರಾಮ ಏ.22ಕ್ಕೆ ಮುಕ್ತಾಯವಾಗಲಿದ್ದು, ಶಾಂತಿ ಮಾತುಕತೆ ಏರ್ಪಡದಿದ್ದಲ್ಲಿ ಮುಂದಿನ ಸ್ಥಿತಿ ಏನಾಗಬಹುದು ಎಂಬ ಆತಂಕ ಜಗತ್ತನ್ನು

ಅಮೆರಿಕ-ಇರಾನ್‌ ಶಾಂತಿ ಮಾತುಕತೆ ಇನ್ನೂ ಅತಂತ್ರ Read More »

ಕರಾವಳಿಯಲ್ಲಿ ಇನ್ನೂ ಐದು ದಿನ ಉಷ್ಣ ಅಲೆ

ಮುನ್ನೆಚ್ಚರಿಕೆ ವಹಿಸಲು ಜನರಿಗೆ ಆರೋಗ್ಯ ಇಲಾಖೆ ಸೂಚನೆ ಬೆಂಗಳೂರು: ಮಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ ಬಿಸಿಲಿನ ಬೇಗೆಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಕರಾವಳಿಯಲ್ಲಿ ಇನ್ನೂ ಐದು ದಿನ ಉಷ್ಣ ಅಲೆ Read More »

ಕಾಂಗ್ರೆಸ್‌ ಶಾಸಕನ ಮನೆ ಬಾಗಿಲಿಗೆ ಬಂದ ಬಿಟ್‌ ಕಾಯಿನ್‌ ಹಗರಣದ ತನಿಖೆ

ನಲಪಾಡ್‌ ನಡೆಸಿದ ಕೋಟಿಗಟ್ಟಲೆ ವ್ಯವಹಾರದ ಮೇಲೆ ಅನುಮಾನ ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಮತ್ತು ಅವರ ಮಗ ಮೊಹಮ್ಮದ್‌ ನಲಪಾಡ್‌ ಮನೆ ಮತ್ತು ಕಚೇರಿಗಳ ಮೆಲೆ ದಾಳಿ ನಡೆಸುವುದರೊಂದಿಗೆ ಕರ್ನಾಟಕದಲ್ಲಿ ಕೆಲ ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ್ದ ಬಿಟ್‌ಕಾಯಿನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಹಗರಣದ ತನಿಖೆ ಈಗ ಕಾಂಗ್ರೆಸ್ ಎನ್.ಎ. ಹ್ಯಾರಿಸ್ ಕುಟುಂಬದ ಹೊಸ್ತಿಲಿಗೆ ಬಂದು ನಿಂತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಸಕ ಹ್ಯಾರಿಸ್ ಮತ್ತು

ಕಾಂಗ್ರೆಸ್‌ ಶಾಸಕನ ಮನೆ ಬಾಗಿಲಿಗೆ ಬಂದ ಬಿಟ್‌ ಕಾಯಿನ್‌ ಹಗರಣದ ತನಿಖೆ Read More »

ಟಿಸಿಎಸ್‌ ಲವ್‌ ಜಿಹಾದ್‌ ಮಾಸ್ಟರ್‌ ಮೈಂಡ್‌ ನಿದಾ ಖಾನ್‌ಗಿಲ್ಲ ಜಾಮೀನು

ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್‌ ನಾಸಿಕ್ : ನಾಸಿಕ್‌ನಲ್ಲಿರುವ ಟಿಸಿಎಸ್‌ನಲ್ಲಿ ನಡೆದಿರುವ ಇಲ್‌ ಜಿಹಾದ್‌ ಪ್ರಕರಣದ ಸೂತ್ರಧಾರಿ ಎನ್ನಲಾಗಿರುವ ನಿದಾ ಖಾನ್‌ಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವಳ ಜಾಮೀನು ಅರ್ಜಿಯನ್ನು ಏಪ್ರಿಲ್ 27ಕ್ಕೆ ವಿಚಾರಣೆ ನಡೆಸಲಾಗುವುದು. ನಿದಾ ಖಾನ್ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ಮಧ್ಯಂತರ ಜಾಮೀನು ಕೋರಿದ್ದರು. ಜಾಮೀನು ಅರ್ಜಿ ಮತ್ತು ಮಧ್ಯಂತರ ಪರಿಹಾರ ಅರ್ಜಿ ಎರಡರ ಮುಂದಿನ ವಿಚಾರಣೆ ಏಪ್ರಿಲ್ 27ಕ್ಕೆ ನಡೆಯಲಿದೆ. ನಾಸಿಕ್‌ನ ಟಾಟಾ

ಟಿಸಿಎಸ್‌ ಲವ್‌ ಜಿಹಾದ್‌ ಮಾಸ್ಟರ್‌ ಮೈಂಡ್‌ ನಿದಾ ಖಾನ್‌ಗಿಲ್ಲ ಜಾಮೀನು Read More »

ಜೀಪು – ಆಪೆ – ಟೆಂಪೋ ನಡುವೆ ಸರಣಿ ಅಪಘಾತ

ಪುತ್ತೂರು: ಮಂಜಲ್ಪಡ್ಪು ಬಳಿಯಲ್ಲಿ ಜೀಪು, ಟೆಂಪೋ ಮತ್ತು ಆಪೆ ‌ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಜೀಪು ‌ಚಾಲಕ ಬ್ರೇಕ್ ಒತ್ತಿದ ಪರಿಣಾಮ ಹಿಂದಿದ್ದ ಆಮೆ ವಾಹನ ಜೀಪ್‌ಗೆ ಗುದ್ದಿದೆ. ಹಾಗೆಯೇ ಆಪೆ ವಾಹನದ ಹಿಂದಿದ್ದ ಟೆಂಪೋ ಆಪೆಗೆ ಢಿಕ್ಕಿಯಾಗಿ ಈ ಸರಣಿ ಅಪಘಾತ ಸಂಭವಿಸಿದೆ.

ಜೀಪು – ಆಪೆ – ಟೆಂಪೋ ನಡುವೆ ಸರಣಿ ಅಪಘಾತ Read More »

ಮನೆಯಂಗಳದಲ್ಲಿ ‌ನಿಲ್ಲಿಸಿದ್ದ ಸ್ಕೂಟಿಗೆ ಕನ್ನ ಹಾಕಿದ ಕಳ್ಳ

ಕಾರ್ಕಳ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ‌ಸ್ಕೂಟಿಯನ್ನು ಮನೆಯ ಬಾಗಿಲು ಒಡೆದು ಒಳನುಗ್ಗಿ, ಸ್ಕೂಟಿಯ ಕೀ ತೆಗೆದುಕೊಂಡು ಕಳ್ಳನೊಬ್ಬ ಎಗರಿಸಿಕೊಂಡು ಹೋದ ಘಟನೆ ಕಸಬಾ ಗ್ರಾಮದ ಆನಂದನಗರದಲ್ಲಿ ‌ನಡೆದಿದೆ. ಕರಿಯಕಲ್ಲು ‌ನಿವಾಸಿ ಹರೀಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಹರೀಶ್ ಅವರು ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದು ಎ. 16 ರಂದು ತೆರಳಿದ್ದರು. ಎ. 19 ರಂದು ಹರೀಶ್ ಅವರಿಗೆ ಸಂಬಂಧಿಕರು ಕರೆ ಮಾಡಿ ಮನೆಯ ಬಾಗಿಲು ಒಡೆದಿರುವ ಬಗ್ಗೆ ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಕಳ್ಳತನ

ಮನೆಯಂಗಳದಲ್ಲಿ ‌ನಿಲ್ಲಿಸಿದ್ದ ಸ್ಕೂಟಿಗೆ ಕನ್ನ ಹಾಕಿದ ಕಳ್ಳ Read More »

error: Content is protected !!
Scroll to Top