ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಭಾರಿ ಆಕ್ರೋಶ

ಬಿಜೆಪಿ ನಾಯಕರಿಂದ ಕಟು ಟೀಕೆ ; ಸೋಷಿಯಲ್‌ ಮೀಡಿಯಾದಲ್ಲಿ ತಿರುಗೇಟು ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೇಲೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಖರ್ಗೆ ಹೇಳಿಕೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ. ತಾನು ಭಯೋತ್ಪಾದಕ ಎಂದು ಕರೆದಿಲ್ಲ, ಮೋದಿ ವಿಪಕ್ಷಗಳನ್ನು ಭಯಪಡಿಸುತ್ತಿದ್ದಾರೆ ಎಂದು ಹೇಳಿದ್ದೇನೆ ಎಂಬುದಾಗಿ ಖರ್ಗೆ ಬಳಿಕ ತೇಪೆ ಹಾಕಲು ಯತ್ನಿಸಿದರೂ ಅವರ ವಿರುದ್ಧ ಆಕ್ರೋಶ ಕಡಿಮೆಯಾಗಿಲ್ಲ. […]

ಮೋದಿಯನ್ನು ಭಯೋತ್ಪಾದಕ ಎಂದ ಖರ್ಗೆ ವಿರುದ್ಧ ಭಾರಿ ಆಕ್ರೋಶ Read More »

ಚಾರ್ಮಾಡಿ ಘಾಟ್‌ನಲ್ಲಿ ಪಿಕಪ್‌ ಪಲ್ಟಿ : ಹಲವರಿಗೆ ಗಾಯ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್ ರಸ್ತೆಯ ಆರನೇ ತಿರುವಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. 25ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಆಂಧ್ರಪ್ರದೇಶ ಮತ್ತು ಬಳ್ಳಾರಿ ಮೂಲದ ಪ್ರಯಾಣಿಕರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. SKSSF ಕಕ್ಕಿಂಜೆ ಅಂಬುಲೆನ್ಸ್, ಚಾರ್ಮಾಡಿ ಹಸನಬ್ಬ ಅವರ ತಂಡ ಹಾಗೂ ರಾಜ್ಯೋತ್ಸವ

ಚಾರ್ಮಾಡಿ ಘಾಟ್‌ನಲ್ಲಿ ಪಿಕಪ್‌ ಪಲ್ಟಿ : ಹಲವರಿಗೆ ಗಾಯ Read More »

ಕದನ ವಿರಾಮ ಅನಿರ್ದಿಷ್ಟಾವಧಿ ವಿಸ್ತರಣೆ : ಟ್ರಂಪ್‌ ಘೋಷಣೆ

ಮಾತುಕತೆಗಳು ಮುಗಿಯುವ ತನಕ ಕದನ ವಿರಾಮ ಎಂದ ಟ್ರಂಪ್‌ ವಾಷಿಂಗ್ಟನ್‌: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಬುಧವಾರ ನಿರ್ಣಾಯಕ ದಿನ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಮುಂದಾಗಿರುವ ಪಾಕಿಸ್ತಾನ ಎರಡು ದೇಶಗಳ ನಡುವೆ ಮತ್ತೊಂದು ಕದನ ವಿರಾಮಕ್ಕೆ ಸಂಬಂಧಿಸಿದ ಶಾಂತಿ ಮಾತುಕತೆಯ ಸಭೆ ಆಯೋಜಿಸಿದೆ. ಅಮೆರಿಕ ಇಸ್ಲಾಮಾಬಾದ್‌ಗೆ ಹೊರಟು ನಿಂತರೆ ಇತ್ತ ಇರಾನ್ ಬರುವಿಕೆ ಇನ್ನೂ ಅಸ್ಪಷ್ಟವಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸಿದ್ದಾರೆ. ಇರಾನ್‌ ನಾಯಕರು ಏಕೀಕೃತ ಪ್ರಸ್ತಾವವೊಂದನ್ನು

ಕದನ ವಿರಾಮ ಅನಿರ್ದಿಷ್ಟಾವಧಿ ವಿಸ್ತರಣೆ : ಟ್ರಂಪ್‌ ಘೋಷಣೆ Read More »

ಗೃಹ ಸಚಿವ ಪರಮೇಶ್ವರ್‌ ವಿರುದ್ಧವೇ ಎಫ್‌ಐಆರ್‌!

ಬೆಟ್ಟಿಂಗ್‌ ಪ್ರಕರಣದಲ್ಲಿ ಕೇಸ್‌ ದಾಖಲಿಸಿ ತನಿಖೆ ಮಾಡಲು ಆದೇಶಿಸಿದ ನ್ಯಾಯಾಲಯ ಬೆಂಗಳೂರು: ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಕೇವಲ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗೃಹಸಚಿವ ಜಿ. ಪರಮೇಶ್ವರ್‌ ವಿರುದ್ಧವೇ ಎಫ್‌ಐಆರ್‌ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ನಾಗಭೂಷಣ್ ಎಂಬುವವರು ಕೋರ್ಟ್‌ಗೆ ಮನವಿ

ಗೃಹ ಸಚಿವ ಪರಮೇಶ್ವರ್‌ ವಿರುದ್ಧವೇ ಎಫ್‌ಐಆರ್‌! Read More »

ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ: ಆರೋಪಿ ವಿರುದ್ಧ ದೂರು ದಾಖಲು

ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿ ಮಾಡಿ, ಹಲ್ಲೆ ನಡೆಸಿದ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ. ಗಾಯಾಳು ಪೊಲೀಸ್ ಪ್ರವೀಣ್ ಎಂಬವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎ. 18 ರಂದು ಸಂಚಾರ ಪೂರ್ವ ಪೊಲೀಸ್ ಠಾಣಾ ಸಿಬ್ಬಂದಿ ಪ್ರವೀಣ್, ಹಲೇಷಾ, ಚಂಪಾ ಎಂಬವರು ನಂತೂರು ಜಂಕ್ಷನ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಪದವು ಕಡೆಯಿಂದ ಬೈಕ್ ಸವಾರನೊಬ್ಬ ಮಹಿಳೆಯೊಬ್ಬಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಬಂದು, ವಾಹನವನ್ನು ಬಿಕರ್ನಕಟ್ಟೆಗೆ ಹೋಗುವ ಫ್ರೀ ಲೆಫ್ಟ್‌ನಲ್ಲಿ ನಿಲ್ಲಿಸಿದ್ದಾನೆ. ಇದರಿಂದ ಇತರ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ: ಆರೋಪಿ ವಿರುದ್ಧ ದೂರು ದಾಖಲು Read More »

ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಇಬ್ಬರು ಸಾವು, ಓರ್ವ ಗಂಭೀರ

ಕಾರವಾರ: ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ದಾಂಡೇಲಿಯ ಅಜಂಗಾವ ಎಂಬಲ್ಲಿ ನಡೆದಿದೆ. ಮೃತರನ್ನು ಧಾರವಾಡದ ಫರೂಖ್ ಸಾಬ್ ಮತ್ತು ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಹಳಿಯಾಳದ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದಾಂಡೇಲಿಯಿಂದ ಹಳಿಯಾಳಕ್ಕೆ ತೆರಳುವ ಸಮಯದಲ್ಲಿ ಈ ಘಟನೆ ನಡೆದಿದೆ. ಢಿಕ್ಕಿಯ ಭೀಕರತೆಗೆ ಕಾರು ಎರಡು ಮರಗಳ ನಡುವೆ ಸಿಲುಕಿಕೊಂಡಿದೆ. ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು: ಇಬ್ಬರು ಸಾವು, ಓರ್ವ ಗಂಭೀರ Read More »

ಪತಿ ಮನೆಯವರ ಕಿರುಕುಳ: ಗೃಹಣಿ ಆತ್ಮಹತ್ಯೆಗೆ ಶರಣು

ಬೆಳಗಾವಿ: ಗೃಹಣಿಯೊಬ್ಬಳು ವರದಕ್ಷಿಣೆಯ ಕುರುಕುಳದಿಂದ ಬೇಸತ್ತು, ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಜ್ಯೋತಿ ನಗರದಲ್ಲಿ ನಡೆದಿದೆ. ಶ್ರೀನಿಧಿ ಸಂತೋಷ್ ನಾವಿ(28) ಎಂಬವರೇ ಮೃತ ದುರ್ದೈವಿ. ಶ್ರೀನಿಧಿ ಅವರು ಸಂತೋಷ್ ಜೊತೆಗೆ 2021 ರಲ್ಲಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಸಹ ಇವರಿಗಿದ್ದಾರೆ. ಗಂಡ ಮತ್ತು ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹ, ಕಿರುಕುಳದಿಂದ ಬೇಸತ್ತು ಶ್ರೀನಿಧಿ ಅವರು ಕಿಟಕಿಗೆ ‌ಶಾಲಿನಿಂದ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಶ್ರೀನಿಧಿ ಅವರು ತವರು

ಪತಿ ಮನೆಯವರ ಕಿರುಕುಳ: ಗೃಹಣಿ ಆತ್ಮಹತ್ಯೆಗೆ ಶರಣು Read More »

ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ ವತಿಯಿಂದ ಭವತಿ ಭಿಕ್ಷಾಂದೇಹಿ ಮೂಲಕ ಸಹಾಯಧನ ವಿತರಣೆ

ಪೊಳಲಿ: ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ (ರಿ.) ಇದರ 8ನೇ ಸೇವಾ ಯೋಜನೆ ಅಡಿಯಲ್ಲಿ ಭವತಿ ಭಿಕ್ಷಾಂದೇಹಿ ಮೂಲಕ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ನಿಧಿ ಸಂಗ್ರಹಣಾ ಅಭಿಯಾನ ನಡೆಸಲಾಗಿದ್ದು, ಒಟ್ಟುಗೂಡಿದ ಒಟ್ಟು ಮೊತ್ತ 1,98,088 ಅನ್ನು ಪೊಳಲಿ ದೇವಸ್ಥಾನದಲ್ಲಿ ಅತಿಥಿಗಳ ಮೂಲಕ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಸಿದಬಿರುವೆರ್ ಕುಡ್ಲ ಸ್ಥಾಪಕ ಅಧ್ಯಕ್ಷರು ಉದಯ್ ಪೂಜಾರಿ, ಉದ್ಯಮಿ ಪ್ರಸಾದ್ ಗರೋಡಿ, ಖ್ಯಾತ ಯೂಟ್ಯೂಬರ್ ವಿಶ್ವನಾಥ್ ಪೂಜಾರಿ ಮತ್ತು ವಿವಿನ್ ಪೂಜಾರಿ, ಲೈಫ್ ಆಫ್

ಹೆಲ್ಪಿಂಗ್ ಫ್ರೆಂಡ್ಸ್ ಪೊಳಲಿ ವತಿಯಿಂದ ಭವತಿ ಭಿಕ್ಷಾಂದೇಹಿ ಮೂಲಕ ಸಹಾಯಧನ ವಿತರಣೆ Read More »

ಪತಂಜಲಿ ಯೋಗ ಕೇಂದ್ರದ ವತಿಯಿಂದ ಪರಶುರಾಮ ಜಯಂತಿ, ಮಹಾಭಾರತ ರಸಪ್ರಶ್ನೆ

ಗೇರುಕಟ್ಟೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಕ್ಷೀರ ಸಂಗಮ ಸಭಾಭವನ ಕಳಿಯ ಗೇರುಕಟ್ಟೆಯೋಗ ಕೇಂದ್ರದಲ್ಲಿ ಪರಶುರಾಮ ಜಯಂತಿಆಚರಿಸಲಾಯಿತು. ವಿಷ್ಣುವಿನ ದಶಾವತಾರಗಳಲ್ಲಿ 6ನೇ ಅವತಾರದಲ್ಲಿ ಪರಶುರಾಮ ಬ್ರಾಹ್ಮಣ್ಯ ಮತ್ತು ಕ್ಷತ್ರಿಯ ಶಕ್ತಿಯ ಪ್ರತೀಕವಾಗಿ ಕೃತ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ ಧರ್ಮಸಂಸ್ಥಾಪನೆ ಮಾಡಿರುವ ಬಗ್ಗೆ ದಿವಾಕರ ಆಚಾರ್ಯ ಗೇರುಕಟ್ಟೆ ಬೌದ್ಧಿಕ ನೀಡಿದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ ಸುವರ್ಣ ಮಹೋತ್ಸವದ ಸರಣಿ ಕಾರ್ಯಕ್ರಮವಾಗಿ ಶ್ರೀ ಮಹಾಭಾರತ ರಸಪ್ರಶ್ನೆ ಸ್ಪರ್ಧೆಯನ್ನು

ಪತಂಜಲಿ ಯೋಗ ಕೇಂದ್ರದ ವತಿಯಿಂದ ಪರಶುರಾಮ ಜಯಂತಿ, ಮಹಾಭಾರತ ರಸಪ್ರಶ್ನೆ Read More »

ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆದ ಖದೀಮ ಪೊಲೀಸರ ಅತಿಥಿ

ಚಿತ್ರದುರ್ಗ: ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಕೃಷಿ ಮಾಡಿದ್ದ ಆರೋಪಿಯನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಚಳ್ಳಕೆರೆ ತಾಲೂಕಿನ ಗಿಂತ ಕೊಲಮ್ಮನಹಳ್ಳಿಯ ಪಾಲಯ್ಯ ಜಿ. ಎಂದು ಗುರುತಿಸಲಾಗಿದೆ. ಪಾಲಯ್ಯ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಕೃಷಿ ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿದೆ. ಆರೋಪಿ ನೆಟ್ಟಿದ್ದ ಸುಮಾರು 18 ಲಕ್ಷ ರೂ. ಮೌಲ್ಯದ 791 ಗಾಂಜಾ ಗಿಡಗಳಿಂದ ಸುಮಾರು 187 ಕೆಜಿ ಸೊಪ್ಪನ್ನು ಪೊಲೀಸರು ಯಶಸ್ವಿಯಾಗಿ ವಶಕ್ಕೆ ಪಡೆದಿದ್ದಾರೆ.

ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆದ ಖದೀಮ ಪೊಲೀಸರ ಅತಿಥಿ Read More »

error: Content is protected !!
Scroll to Top