ದನ ತೊಳೆಯಲು ಹೋದ ಬಾಲಕ ನೀರಿಗೆ ಬಿದ್ದು ಸಾವು

ತುಮಕೂರು: ಹಸುವನ್ನು ಸ್ನಾನ ಮಾಡಿಸುವ ಉದ್ದೇಶದಿಂದ ಕೆರೆ ಸಮೀಪ ತೆರಳಿದ್ದ ಬಾಲಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಹೆರೂರಿನ ಕಿಟ್ಟದಕುಪ್ಪೆ ಎಂಬಲ್ಲಿ ನಡೆದಿದೆ. ಮಧು(12) ಎಂಬಾತನೇ ‌ಮೃತ ಬಾಲಕ. ಮಧ್ಯಾಹ್ನದ ವೇಳೆಗೆ ಮಧು ದನಗಳನ್ನು ತೊಳೆಯುವುದಕ್ಕಾಗಿ ಕೆರೆಯತ್ತ ‌ತೆರಳಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಈಜು ಬಾರದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ. ಅಗ್ನಿಶಾಮಕ ದಳ ಸಹ ಬಾಲಕನ ಪತ್ತೆಗೆ […]

ದನ ತೊಳೆಯಲು ಹೋದ ಬಾಲಕ ನೀರಿಗೆ ಬಿದ್ದು ಸಾವು Read More »

ಸಂಶಯದಿಂದ ‌ಪತ್ನಿಯ ಉಸಿರು ನಿಲ್ಲಿಸಿದ ಪತಿ ಪೊಲೀಸರಿಗೆ ಶರಣು

ಮೈಸೂರು: ಕೆಲಸ ಮುಗಿದ ಮೇಲೆ ಪತ್ನಿ ತಡವಾಗಿ ಮನೆಗೆ ಬರುತ್ತಾಳೆ ಎನ್ನುವ ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಪತ್ನಿಯನ್ನು ಪತಿಯೇ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ‌. ಮೃತಳನ್ನು ಪುಷ್ಪ (24) ಎಂದು ಗುರುತಿಸಲಾಗಿದೆ. ಪುಷ್ಪ ಪತಿ ಮಹೇಶ್ ಎಂಬಾತನೇ ಹತ್ಯೆ ಮಾಡಿದ ಆರೋಪಿ. ಪತ್ನಿ ಮನೆಗೆ ಬರುತ್ತಿದ್ದ ಹಾಗೆ ಆಕೆಗೆ ಕೊಡಲಿಯಿಂದ ಹಲ್ಲೆ ನಡೆಸಿ, ನೆಲಕ್ಕೆ ಬಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಪುಷ್ಪ ನಗರದ ಬಟ್ಟೆ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು

ಸಂಶಯದಿಂದ ‌ಪತ್ನಿಯ ಉಸಿರು ನಿಲ್ಲಿಸಿದ ಪತಿ ಪೊಲೀಸರಿಗೆ ಶರಣು Read More »

ಗಡೀಪಾರು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ತಮ್ಮ ಗಡೀಪಾರು ಅರ್ಜಿಯನ್ನು ಪ್ರಶ್ನೆ ಮಾಡಿ ಮಹೇಶ್ ಶೆಟ್ಟಿ ತಿಮರೋಡಿ ‌ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದು ಮಾಡಿದೆ. ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ಗಡೀಪಾರು ಆದೇಶ ಪ್ರಶ್ನಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಜಿ ವಜಾಗೊಳಿಸಿದೆ. ಗಡೀಪಾರು ಪ್ರಶ್ನಿಸಿ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು. ಹೀಗಾಗಿ ರಿಟ್ ಅರ್ಜಿ ಊರ್ಜಿತವಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೆಯೇ ಗಡೀಪಾರು ಸಂಬಂಧ ಎರಡು ವಾರ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌

ಗಡೀಪಾರು ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ Read More »

ಗಾಂಜಾ ಸಹಿತ ಮೂವರು ಆರೋಪಿಗಳು ಮಡಿಕೇರಿ ಪೊಲೀಸರ ವಶಕ್ಕೆ

ಮಡಿಕೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಗಾಂಜಾ ಸಮೇತ ಮಡಿಕೇರಿ ಗ್ರಾಮಾಂತರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಜಾಬೀರ್, ಒರಿಸ್ಸಾದ ಸುಲ್ತಾನ್ ಪ್ರದಾನ್, ಮದಿನಂಜು ಗ್ರಾಮದ ಸ್ವರ್ಣಲತಾ ‌ನಾಯಕ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 15.903 ಕಿಲೋ ಗ್ರಾಮ್ ಗಾಂಜಾ ಮತ್ತು ಮೂರು ಮೊಬೈಲ್ ಫೋನ್‌ಗಳನ್ನು ‌ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇಬ್ನಿವಳವಾಡಿ ಗ್ರಾಮದ ಸಿಂಕೋನಾದಿಂದ ಮಕ್ಕಂದೂರಿಗೆ ತೆರಳುವ ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ

ಗಾಂಜಾ ಸಹಿತ ಮೂವರು ಆರೋಪಿಗಳು ಮಡಿಕೇರಿ ಪೊಲೀಸರ ವಶಕ್ಕೆ Read More »

140 ಕೋಳಿಗಳನ್ನು ಬಲಿ ಪಡೆದ ಮದುವೆಯ ಡಿ.ಜೆ. ಸದ್ದು

ಲಕ್ನೋ: ಮದುವೆಯ ಮೆರವಣಿಗೆಯಲ್ಲಿ ಬಳಸಿದ ಬಾರಿ ಸದ್ದಿನ ಡಿ.ಜೆ. ಗೆ ತನ್ನ 140 ಕೋಳಿಗಳು ಸಾವನ್ನಪ್ಪಿವೆ ಎಂದು ಆರೋಪಿಸಿ, ಕೋಳಿಗಳ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾನೆ. ಉತ್ತರ ಪ್ರದೇಶದ ಸುಲ್ತಾನಪುರದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿರುವುದಾಗಿದೆ. ತನ್ನ ಕೋಳಿ ಸಾಕಾಣಿಕೆ ಪ್ರದೇಶದ ಸಮೀಪ ಭಾರೀ ಸದ್ದಿನ ಜೊತೆಗೆ ಡಿ. ಜೆ. ಹಾಕಿಕೊಂಡು ಮದುವೆಯ ಮೆರವಣಿಗೆ ಸಾಗಿದೆ. ಇದರಿಂದ ಭಯಭೀತವಾದ 180 ಕೋಳಿಗಳು ‌ಪ್ರಾಣ ಬಿಟ್ಟಿವೆ‌ ಎಂದು ಸಬೀರ್ ಅಲಿ ಎಂಬವರು ದೂರಿನಲ್ಲಿ ಹೇಳಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು

140 ಕೋಳಿಗಳನ್ನು ಬಲಿ ಪಡೆದ ಮದುವೆಯ ಡಿ.ಜೆ. ಸದ್ದು Read More »

ತಾಯಿಯೊಂದಿಗೆ ಬಟ್ಟೆ ಖರೀದಿಗೆ ಹೋಗಿದ್ದ ಹುಡುಗ ವಿದ್ಯುತ್ ತಂತಿ ಸ್ಪರ್ಶದಿಂದ ಸಾವು

ಬೆಂಗಳೂರು: ತಾಯಿಯೊಂದಿಗೆ ಬಟ್ಟೆ ಖರೀದಿಸಲು ಬಂದು ಬೈಕ್ ಪಾರ್ಕ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ಬಿದ್ದು ಶಾಕ್ ಹೊಡೆದು ಮಗ ಮೃತಪಟ್ಟಿದ್ದು, ಇದನ್ನು ಕಂಡ ತಾಯಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಹೃದಯ ವಿದ್ರಾವಕ ಘಟನೆ ಶಿವಾಜಿನಗರದಲ್ಲಿ ನಡೆದಿದೆ. ಮೃತನನ್ನು ‌ಸಯ್ಯದ್ ಸುಫಿಯಾನ್ (17) ಎಂದು ಗುರುತಿಸಲಾಗಿದೆ. ಮಗನ ಸಾವನ್ನು ಕಣ್ಣಾರೆ ಕಂಡು ಅನಾರೋಗ್ಯಕ್ಕೆ ತುತ್ತಾದ ತಾಯಿ ಉಮೇ ‌ಸಲ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿತೀಯ ಪಿಯುಸಿ‌ಗೆ ಕಾಲೇಜಿಗೆ ಹೋಗಲು ಬಟ್ಟೆ ಖರೀದಿಗೆಂದು ಆತ ತಾಯಿಯ ಜೊತೆಗೆ

ತಾಯಿಯೊಂದಿಗೆ ಬಟ್ಟೆ ಖರೀದಿಗೆ ಹೋಗಿದ್ದ ಹುಡುಗ ವಿದ್ಯುತ್ ತಂತಿ ಸ್ಪರ್ಶದಿಂದ ಸಾವು Read More »

ಅಶಕ್ತ ವೃದ್ಧೆಗೆ ಸೂಕ್ತ ಚಿಕಿತ್ಸೆ ನೀಡಿ, ಪುನರ್ವಸತಿ ಕಲ್ಪಿಸಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು

ಪುತ್ತೂರು: ಒಳ ರೋಗಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊಡಿಂಬಾಡಿಯ ದಾರಂದಕುಕ್ಕು ನಿವಾಸಿ ಲಕ್ಷ್ಮೀ (80) ಎಂಬ ವೃದ್ಧೆಗೆ ಪುನರ್ವಸತಿ ಕಲ್ಪಿಸಿ‌ ಮಾನವೀಯತೆ ಮೆರೆದ ಹೃದಯಸ್ಪರ್ಶಿ ಘಟನೆ ನಡೆದಿದೆ. ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸಾಯುವ ಸ್ಥಿತಿಗೆ ತಲುಪಿದ್ದ ಲಕ್ಷ್ಮೀ ಅಮ್ಮನಿಗೆ ಸರ್ಕಾರಿ ಆಸ್ಪತ್ರೆಯ ಡಾ. ಯದುರಾಜ್ ‌ಡಿ. ಕೆ. ಅವರ ತಂಡ ಸೂಕ್ತ ಚಿಕಿತ್ಸೆ ನೀಡಿದ್ದು, ಇದರಿಂದ ಆ ತಾಯಿ ಚೇತರಿಸಿಕೊಂಡು ನಡೆದಾಡುವ ಸ್ಥಿತಿಗೆ ಬಂದಿದ್ದಾರೆ. ಆ ಬಳಿಕ ಲಕ್ಷ್ಮೀ ಅಮ್ಮನನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳ ಮನವಿಯ ಮೇರೆಗೆ ಮಹಿಳಾ

ಅಶಕ್ತ ವೃದ್ಧೆಗೆ ಸೂಕ್ತ ಚಿಕಿತ್ಸೆ ನೀಡಿ, ಪುನರ್ವಸತಿ ಕಲ್ಪಿಸಿದ ಪುತ್ತೂರು ಸರ್ಕಾರಿ ಆಸ್ಪತ್ರೆಯ ವೈದ್ಯರು Read More »

ಡಿವೈಡರ್‌ ಹಾರಿದ ಪಿಕಪ್‌ : 15 ಕಾರ್ಮಿಕರು ಸಾವು

ಭೋಪಾಲ್ : ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಲ್ಟಿ ಹೊಡೆದ ಪಿಕಪ್ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ 10.30ರ ಸುಮಾರಿಗೆ ಸಂಭವಿಸಿದೆ. ತಿರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಲಿಯಾ ಬೈಪಾಸ್ ಬಳಿಯ ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 46 ಕಾರ್ಮಿಕರನ್ನು ಈ ಪಿಕಪ್ ಹೊತ್ತೊಯ್ಯುತ್ತಿತ್ತು. ಪಿಕಪ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡಿದ್ದ ಕಾರಣ ಅತಿ ವೇಗದಿಂದಾಗಿ ನಿಯಂತ್ರಣ

ಡಿವೈಡರ್‌ ಹಾರಿದ ಪಿಕಪ್‌ : 15 ಕಾರ್ಮಿಕರು ಸಾವು Read More »

ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಸ್ಫೋಟ ಬೆದರಿಕೆ

ಸೀಸಿಯಮ್ ವಿಕಿರಣ ಹಾಯಿಸಿ ಸ್ಫೋಟಿಸುವ ಎಚ್ಚರಿಕೆ ನಾಗಪುರ : ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿ ಮತ್ತು ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಗುರಿಯಾಗಿಸಿಕೊಂಡು ವಿಕಿರಣಶೀಲ ವಸ್ತುಗಳ ಮೂಲಕ ದಾಳಿ ನಡೆಸುವ ಬೆದರಿಕೆ ಪತ್ರವೊಂದು ಪೊಲೀಸ್ ಇಲಾಖೆಗೆ ಲಭ್ಯವಾಗಿದೆ. ಪತ್ರದ ಗಂಭೀರತೆಯನ್ನು ಅರಿತ ಪೊಲೀಸ್ ಆಯುಕ್ತರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಮುಂಬೈನಿಂದ ಆಗಮಿಸಿದ ಪರಮಾಣು ಶಕ್ತಿ ತಜ್ಞರ ವಿಶೇಷ

ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಸ್ಫೋಟ ಬೆದರಿಕೆ Read More »

ಪ್ರಿವೆಡ್ಡಿಂಗ್‌ ಶೂಟ್‌ಗೆ ಹೋಗುವಾಗ ಅಪಘಾತ : ವರ ಸಾವು

ಹಾಸನ: ಕೆಲವೇ ದಿನಗಳಲ್ಲಿ ಹಸೆಮಣೆಏರಬೇಕಿದ್ದ ವರನೊಬ್ಬ ಪ್ರಿವೆಡ್ಡಿಂಗ್ ಶೂಟ್‌ಗೆ ವಧುವನ್ನು ಕರೆತರಲು ಹೋಗುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ಯುವಕನನ್ನು ಮನು ಎಲ್‌.ಎನ್. (29) ಎಂದು ಗುರುತಿಸಲಾಗಿದೆ.ಮೇ 10ರಂದು ಆಲೂರು ತಾಲೂಕು ತೊಗರನಹಳ್ಳಿ ಗ್ರಾಮದ ಕಾಂಚನ ಜೊತೆ ಮನು ಅವರ ಮದುವೆ ನಿಶ್ಚಯವಾಗಿತ್ತು. ಇಂದು ಬೆಳಗ್ಗೆ ಮನು ಪ್ರಿವೆಡ್ಡಿಂಗ್ ಶೂಟಿಂಗ್‌ಗಾಗಿ ವಧುವನ್ನು ಕರೆತರಲು ಕಾರಿನಲ್ಲಿ ಹೊರಟಿದ್ದರು. ಕಾರು ಸಕಲೇಶಪುರದ

ಪ್ರಿವೆಡ್ಡಿಂಗ್‌ ಶೂಟ್‌ಗೆ ಹೋಗುವಾಗ ಅಪಘಾತ : ವರ ಸಾವು Read More »

error: Content is protected !!
Scroll to Top