ಮಹಿಳೆಗೆ ಅಗೌರವ, ಜೀವ ಬೆದರಿಕೆ: ತಿಮರೋಡಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ದೂರವಾಣಿ ಮೂಲಕ ಮಹಿಳೆಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಕ್ಷಗಾನ ಕಲಾವಿದ ದಿನೇಶ್ ಕೊಡಪದವು ಅವರ ತಾಯಿ ಬಂಟ್ವಾಳದ ಲೀಲಾವತಿ (71) ಅವರು ದೂರು ನೀಡಿದ್ದಾರೆ. ತಿಮರೋಡಿ ಫೋನ್ ಮೂಲಕ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡಿ ಮಹಿಳೆಯ ತೇಜೋವಧೆ ಮಾಡಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ತರುವ ರೀತಿ ಮಾತನಾಡಿದ್ದು ಮಾತ್ರವಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ. ಈ […]

ಮಹಿಳೆಗೆ ಅಗೌರವ, ಜೀವ ಬೆದರಿಕೆ: ತಿಮರೋಡಿ ವಿರುದ್ಧ ಪ್ರಕರಣ ದಾಖಲು Read More »

ದೇವಾಲಯ ಅಪವಿತ್ರ: ಪ್ರವಾಸಿಗರ ವಿರುದ್ಧ ಭಕ್ತರ ಆಕ್ರೋಶ

ಚಿಕ್ಕಮಗಳೂರು: ಮೂಡಿಗೆರೆಯ ದುರ್ಗದಹಳ್ಳಿಯ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಮದ್ಯಪಾನ, ಧೂಮಪಾನ‌ದ ಮೂಲಕ ಪ್ರವಾಸಿಗರು ದೇಗುಲದ ಪಾವಿತ್ರ್ಯತೆಗೆ ಭಂಗ ತರುತ್ತಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ದೇಗುಲದ ಆವರಣದಲ್ಲಿ ಸಿಗರೇಟು ಸೇದುತ್ತಿದ್ದ ವ್ಯಕ್ತಿಯನ್ನು ಭಕ್ತರು ತರಾಟೆಗೆ ತೆಗೆದುಕೊಂಡ ಘಟನೆ ಸಹ ನಡೆದಿದೆ. ಕೆಲವು ಪ್ರವಾಸಿಗರು ದೇವಾಲಯದ ಸುತ್ತ ಅನೈತಿಕ ಚಟುವಟಿಕೆಗಳನ್ನೂ ನಡೆಸುತ್ತಿದ್ದು, ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಭಕ್ತರು ದೂರುತ್ತಿದ್ದಾರೆ. ದೇವಸ್ಥಾನದ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ತಕ್ಷಣವೇ ಸೂಕ್ತ ಕ್ರಮ

ದೇವಾಲಯ ಅಪವಿತ್ರ: ಪ್ರವಾಸಿಗರ ವಿರುದ್ಧ ಭಕ್ತರ ಆಕ್ರೋಶ Read More »

ಮಗುವಿನ ಚೈನ್ ಕಳ್ಳತನ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವ್ಯಕ್ತಿಯಲ್ಲ ಕಳ್ಳ

ವಿಟ್ಲ: ಕೊಡಪದವು ಪ್ರದೇಶದಲ್ಲಿ ಎ. 12 ರಂದು 7 ವರ್ಷದ ಮಗುವಿನ ಕತ್ತಿನಿಂದ ಅಪರಿಚಿತ ಬೈಕ್ ಸವಾರನೊಬ್ಬ 7 ಗ್ರಾಂ ತೂಕದ ಬಂಗಾರದ ಸರವನ್ನು ಎಗರಿಸಿದ್ದು, ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಆರೋಪಿ ಎಂದು ಕೆ.ಟಿ.ಎಂ. ಬೈಕ್ ಸವಾರನೊಬ್ಬನನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದ್ದು, ಆತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆ ವ್ಯಕ್ತಿಗೆ ಮತ್ತು ಪ್ರಕರಣಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ ಎನ್ನುವುದು ತಿಳಿದು ಬಂದಿದೆ. ಆದ್ದರಿಂದ ಆ

ಮಗುವಿನ ಚೈನ್ ಕಳ್ಳತನ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವ್ಯಕ್ತಿಯಲ್ಲ ಕಳ್ಳ Read More »

ಪತಂಜಲಿ ಯೋಗ ಶಾಖೆಯಲ್ಲಿ ಸೌರ ಯುಗಾದಿ ಆಚರಣೆ

ಪುತ್ತೂರು: ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಇದರ ಕ್ಷೀರ ಸಂಗಮ ಸಭಾಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ ಪಂಚಾಂಗ ಪಠಣ, ಭಜನಾ ಸಂಕೀರ್ತನೆ, ಧ್ಯಾನ, ಸೂರ್ಯ ನಮಸ್ಕಾರ ಅಮೃತ ಫಲಹಾರದೊಂದಿಗೆ ಸೌರ ಯುಗಾದಿಯನ್ನು ಆಚರಿಸಲಾಯಿತು. ಹಿರಿಯ ಯೋಗ ಬಂದು ಭಾರತಿ ಸೌರ ಯುಗಾದಿಯ ಬಗ್ಗೆ ಬೌದ್ಧಿಕ ನೀಡಿದರು. ಕೇಂದ್ರದ ಸಂಚಾಲಕ ವಿಜಯ, ಅಶೋಕ, ದಿವಾಕರ ಆಚಾರ್ಯ, ಸತೀಶ, ಶಿವಣ್ಣ, ಪದ್ಮಲತಾ, ಹರ್ಷಿತಾ ಮೊದಲಾದವರು ಭಾಗವಹಿಸಿದ್ದರು.

ಪತಂಜಲಿ ಯೋಗ ಶಾಖೆಯಲ್ಲಿ ಸೌರ ಯುಗಾದಿ ಆಚರಣೆ Read More »

ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

ಬೆಳ್ತಂಗಡಿ: ಉಜಿರೆಯಲ್ಲಿ ಕಳೆದ ವರ್ಷ ನಡೆದ ಗಲಾಟೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ವಿಚಾರಣೆಗೆ ಹಾಜರಾಗದ ಹಿಂದೂ ನಾಯಕ ಪುನೀತ್ ಕೆರೇಹಳ್ಳಿ ಅವರನ್ನು ಬೆಳ್ತಂಗಡಿ ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಮತ್ತು ಪುನೀತ್ ಕೆರೆಹಳ್ಳಿ ಅವರ ಬೆಂಬಲಿಗರ ನಡುವೆ 2025 ರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಬಂಧನ ಇದಾಗಿದೆ. ಎ. 15 ರಂದು ಬೆಂಗಳೂರಿಗೆ ತೆರಳಿದ ಬೆಳ್ತಂಗಡಿ ಪೊಲೀಸರು ಕೆರೆಹಳ್ಳಿ ಅವರನ್ನು ಬಂಧಿಸಿರುವುದಾಗಿದೆ. ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದು ಪೊಲೀಸರು ಅವರನ್ನು

ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು Read More »

ಗ್ರಾ. ಪಂ. ಮಾಜಿ ಸದಸ್ಯನ ಭೀಕರ ಕೊಲೆ

ವಿಜಯಪುರ: ರಿಯಲ್ ಎಸ್ಟೇಟ್ ಉದ್ಯಮಿ, ಗ್ರಾ. ಪಂ. ಮಾಜಿ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತನನ್ನು ಗೊಡಂದಡ್ಡಿ ನಿವಾಸಿ ರಾಜು ಬಾಪು ಖರೆ ಎಂದು ಗುರುತಿಸಲಾಗಿದೆ. ರಾಜು ಅವರು ಹೋಗುತ್ತಿದ್ದ ಜೀಪಿಗೆ ಟಿಪ್ಪರ್ ಗುದ್ದಿಸಿ, ಬಳಿಕ ಬೇಕಾಬಿಟ್ಟಿ ಗುಂಡು ಹಾರಿಸಿದ ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿದ್ದಾರೆ. ಥಾರ್ ಜೀಪ್‌ನ ಡೋರ್ ಓಪನ್ ಆಗದೇ ಇದ್ದ ಸಮಯದಲ್ಲಿ ಅದರ ಮೇಲೆ ಕಲ್ಲನ್ನೂ ಎತ್ತಿ ಹಾಕಿ ಮತ್ತಷ್ಟು ಕ್ರೌರ್ಯ ಮೆರೆದಿದ್ದಾರೆ. ಈ ಕೊಲೆಗೆ ಕಾರಣ ಏನು ಎಂಬುದು

ಗ್ರಾ. ಪಂ. ಮಾಜಿ ಸದಸ್ಯನ ಭೀಕರ ಕೊಲೆ Read More »

ಪುತ್ರಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಂಗಳೂರು: ತನ್ನ ಹದಿನೇಳು ವರ್ಷದ ಪುತ್ರಿಯನ್ನು ಹತ್ಯೆ ಮಾಡಿ ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾದ ಘಟನೆ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗಳನ್ನು ಕಾರುಣ್ಯ ಎಂದು ಗುರುತಿಸಲಾಗಿದೆ. ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿಯ ಹೆಸರು ಸುವರ್ಣ. ಈ ಕೊಲೆ ಮತ್ತು ಆತ್ಮಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ವೈಟ್ ಫೀಲ್ಡ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಪುತ್ರಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ Read More »

ಶ್ರೀರಂಗ ತುಲಾಭಾರ ಮತ್ತು ಭಕ್ತಸುಧನ್ವ ತಾಳಮದ್ದಳೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದಲ್ಲಿ ವಿಷು ಸಂಕ್ರಮಣ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ ಪ್ರೊ. ಪವನ್ ಕಿರಣಕೆರೆ ರಚಿತ ಶ್ರೀ ರಂಗ ತುಲಾಭಾರ ಮತ್ತು ಭಕ್ತ ಸುಧನ್ವ ಜರಗಿತು. ಭಾಗವತರಾಗಿ ಮಹೇಶ ಕನ್ಯಾಡಿ, ವೆಂಕಟ್ರಮಣ ರಾವ್ ಬನ್ನೆಂಗಳ, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ರವಿರಾಜ ಜೈನ್ ಕಾರ್ಕಳ ಅರ್ಥಧಾರಿಗಳಾಗಿ ಹರಿದಾಸ ಗಾಂಭೀರ ಧರ್ಮಸ್ಥಳ. (ಶ್ರೀಕೃಷ್ಣ), ದಿವಾಕರ ಆಚಾರ್ಯ ಗೇರುಕಟ್ಟೆ (ಸತ್ಯಭಾಮ), ಸುರೇಶ ಕುದ್ರೆಂತ್ತಾಯ ಉಜಿರೆ (ನಾರದ), ಶ್ರೀನಿವಾಸ್ ರಾವ್ ಧರ್ಮಸ್ಥಳ (ಬಲರಾಮ), ದಿನೇಶ್ ರಾವ್

ಶ್ರೀರಂಗ ತುಲಾಭಾರ ಮತ್ತು ಭಕ್ತಸುಧನ್ವ ತಾಳಮದ್ದಳೆ Read More »

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಪುತ್ತೂರು : ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು . ಶಾಲಾ ಆಡಳಿತ ಸಮಿತಿಯ ಉಪಾಧ್ಯಕ್ಷ ಉಮೇಶ್ ಮಲುವೇಲು ಅವರು ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು‌. ಬಳಿಕ ಮಾತನಾಡಿದ ಅವರು, ದೇಶವು ಸುಗಮವಾಗಿ ಮುನ್ನಡೆಯಬೇಕಾದರೆ ಪೂರಕವಾದ ಕಾನೂನು ಚೌಕಟ್ಟು ಅಗತ್ಯ. ಸುಗಮ ಆಡಳಿತಕ್ಕೆ ಕಾನೂನು ವ್ಯವಸ್ಥಿತ ಸಂವಿಧಾನವನ್ನು ರಚಿಸುವಲ್ಲಿ ಡಾ. ಬಿಆರ್ ಅಂಬೇಡ್ಕರ್ ರವರು ಪ್ರಧಾನ ಪಾತ್ರ ವಹಿಸಿದ್ದರು ಎಂದರು. ಶಾಲಾ ಸಂಚಾಲಕ

ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ Read More »

ಮೋದಿಗೆ ಸಿದ್ದರಾಮಯ್ಯ ಆತ್ಮೀಯ ಸ್ವಾಗತ

ರಾಜ್ಯದ 18 ಬೇಡಿಕೆಗಳ ಮನವಿ ಸಮರ್ಪಣೆ ಬೆಂಗಳೂರು: ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಎಚ್‌ಎಎಲ್‌ ನಿಲ್ದಾಣದಲ್ಲಿ‌ ಸಿಎಂ ಸಿದ್ದರಾಮಯ್ಯ ಖುದ್ದು ಸ್ವಾಗತ ಮಾಡಿದ್ದಾರೆ. ಸಿದ್ದರಾಮಯ್ಯನವರು ಪ್ರಧಾನಿಗಳಿಗೆ ರಾಜ್ಯಕ್ಕೆ ಸಂಬಂಧಿಸಿದ 18 ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರ ಕೂಡಲೇ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸಬೇಕು ಅಂತ ಪತ್ರದಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಾವೀನ್ಯತೆಯ ಮನೋಭಾವದೊಂದಿಗೆ, ರಾಷ್ಟ್ರೀಯ ಅಭಿವೃದ್ಧಿಯ ಪ್ರಮುಖ ಸ್ತಂಭವಾಗಿ ಮುಂದುವರಿದಿದೆ. ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಕೃಷಿ

ಮೋದಿಗೆ ಸಿದ್ದರಾಮಯ್ಯ ಆತ್ಮೀಯ ಸ್ವಾಗತ Read More »

error: Content is protected !!
Scroll to Top