ಸುದ್ದಿ

ಬಂಟ್ವಾಳ : 2.38 ಲಕ್ಷ ರೂ. ನಕಲಿ ನೋಟು ವಶ, ಇಬ್ಬರ ಬಂಧನ

ಬಂಟ್ವಾಳ: 2.38 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಮೊಹಮ್ಮದ್ ಸಮೀರ್ (28) ಮತ್ತು ಮೊಹಮ್ಮದ್ ಇರ್ಫಾನ್ (26) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ನಕಲಿ ನೋಟುಗಳ ಚಲಾವಣೆಯ ಬಗ್ಗೆ ದೊರೆತ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ನಡೆಸಿದ ಕಾರ್ಯಾಚರಣೆಯ ನಂತರ ಬಂಧಿಸಲಾಗಿದೆ. ಹೆಚ್ಚಿನ ಮೌಲ್ಯದ ನಕಲಿ ನೋಟುಗಳನ್ನು ಹೊಂದಿದ್ದ ಆರೋಪಿಗಳು ಚಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೂರು […]

ಬಂಟ್ವಾಳ : 2.38 ಲಕ್ಷ ರೂ. ನಕಲಿ ನೋಟು ವಶ, ಇಬ್ಬರ ಬಂಧನ Read More »

ದುಬೈಯಿಂದ ಗಂಡ ಪಾರ್ಸಲ್‌ ಕಳುಹಿಸಿದ ಕಥೆ ನಂಬಿ 6.84 ಲ.ರೂ. ಕಳೆದುಕೊಂಡ ಮಹಿಳೆ

ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಂಗಳೂರು : ದುಬೈನಿಂದ ಪತಿ ಕಳುಹಿಸಿದ ಪಾರ್ಸೆಲ್ ಪಡೆಯಲು ಹಣ ನೀಡಬೇಕು ಎಂಬ ವಂಚಕರ ಮಾತು ನಂಬಿದ ಮಹಿಳೆಯೊಬ್ಬರು ಬರೋಬ್ಬರಿ 6,84,500 ರೂ. ವಂಚಕರಿಗೆ ನೀಡಿ ಮೋಸ ಹೋಗಿದ್ದಾರೆ. ಈ ಬಗ್ಗೆ ಹಣ ಕಳಕೊಂಡ ಮಹಿಳೆ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಮಂಗಳೂರಿನಲ್ಲಿ ವಾಸವಾಗಿದ್ದು ಪತಿ ದುಬೈನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಂದ ತನಗೆ ಬೇಕಾಗುವ ವಸ್ತುಗಳನ್ನು ಪಾರ್ಸೆಲ್ ಮೂಲಕ ಕಳುಹಿಸುತ್ತಿದ್ದರು. ಏ.21ರಂದು ಸಂಜೆ ತಾನು

ದುಬೈಯಿಂದ ಗಂಡ ಪಾರ್ಸಲ್‌ ಕಳುಹಿಸಿದ ಕಥೆ ನಂಬಿ 6.84 ಲ.ರೂ. ಕಳೆದುಕೊಂಡ ಮಹಿಳೆ Read More »

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಜೈಲು

ಕೃತ್ಯ ನಡೆದ ಐದೇ ತಿಂಗಳಲ್ಲಿ ಪ್ರಕಟವಾದ ತೀರ್ಪು ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ದಯಾನಂದ ಮೂಲ್ಯ (44) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿ ಎಸ್‌ಸಿ-2) ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿದ್ದಾರೆ. ಕೃತ್ಯ ನಡೆದ ಐದೇ ತಿಂಗಳಲ್ಲಿ ತೀರ್ಪು ಪ್ರಕಟವಾಗಿರುವುದು ವಿಶೇಷವಾಗಿದೆ. 2025ರ ನ.16ರಂದು ಮಧ್ಯಾಹ್ನ 2ಕ್ಕೆ ಏಳು ವರ್ಷ ಪ್ರಾಯದ ಬಾಲಕಿ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಜೈಲು Read More »

ಗೊಂದಲ, ಹೈಡ್ರಾಮಾಕ್ಕೆ ಸಾಕ್ಷಿಯಾದ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ

ಮಧ್ಯರಾತ್ರಿ ಕಳೆದರೂ ಪ್ರಕಟವಾಗದ ಫಲಿತಾಂಶ ಚಿಕ್ಕಮಗಳೂರು : ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಶನಿವಾರ ತೀವ್ರ ಗೊಂದಲ ಮತ್ತು ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮಧ್ಯರಾತ್ರಿ ಕಳೆದರೂ ಈ ಕುರಿತ ಗೊಂದಲ ಮುಗಿದಿಲ್ಲ. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಮರು ಎಣಿಕೆಯಲ್ಲೂ ಗೆಲುವು ಸಾಧಿಸುವ ಮೂಲಕ ತಮ್ಮ ಸ್ಥಾನವನ್ನು ಮರುಸ್ಥಾಪಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ 55 ಮತಗಳಿಂದ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಗೊಂದಲ, ಹೈಡ್ರಾಮಾಕ್ಕೆ ಸಾಕ್ಷಿಯಾದ ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ Read More »

ಬಿರುಗಾಳಿಗೆ ಸಿಲುಕಿ ಮಗುಚಿದ ದೋಣಿ: ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆ

ಮಂಡ್ಯ: ಮೀನುಗಾರಿಕೆಗೆ ‌ತೆರಳಿದ್ದ ದೋಣಿ ಬಿರುಗಾಳಿಗೆ‌ ಸಿಕ್ಕಿ ಮಗುಚಿದ ಪರಿಣಾಮ ಯುವಕನೊಬ್ಬ ಕಾಣೆಯಾದ ಘಟನೆ ಶ್ರೀರಂಗಪಟ್ಟಣದ ಕೆಆರ್‌ಎಸ್ ಡ್ಯಾಮ್‌ನ ಹಿನ್ನೀರಿನಲ್ಲಿ ನಡೆದಿದೆ. ನಾಪತ್ತೆಯಾದವನನ್ನು ‌ಪಾಂಡವಪುರದ ಗಿರಿಯಾರಹಳ್ಳಿಯ ಮಧು (26) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಮಧು ಮೀನು ಹಿಡಿಯುವ ಸಲುವಾಗಿ ಕೆಆರ್‌ಎಸ್‌ ಹಿನ್ನೀರಿಗೆ ದೋಣಿಯಲ್ಲಿ ತೆರಳಿದ್ದಾನೆ. ಈ ಸಮಯದಲ್ಲಿ ಗಾಳಿ ಜೋರಾಗಿ ಬೀಸಿದೆ. ಗಾಳಿಯ ರಭಸಕ್ಕೆ ದೋಣಿ ಮಗುಚಿದೆ. ಮಧು ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ನಾಪತ್ತೆಯಾದ ಮಧುವಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಕೆ‌ಆರ್‌ಎಸ್ ಪೊಲೀಸ್

ಬಿರುಗಾಳಿಗೆ ಸಿಲುಕಿ ಮಗುಚಿದ ದೋಣಿ: ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆ Read More »

ಬಿಜೆಪಿ ಮತ್ತು ಜಗನ್ನಿವಾಸ ‌ರಾವ್‌ಗೆ ಯಾವುದೇ ಸಂಬಂಧ ಇಲ್ಲ: ಸತೀಶ್ ಕುಂಪಲ

ಮಂಗಳೂರು: ಯುವತಿಯನ್ನು ಪ್ರೇಮಿಸುವ ನಾಟಕವಾಡಿ, ಮಗು ಕರುಣಿಸಿ‌ ಬಳಿಕ ಮದುವೆಯಾಗದೆ‌ ಮೋಸ‌ ಮಾಡಿರುವ ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣ ಬಿಜೆಪಿಗೂ ಸಾಕಷ್ಟು ಮುಖಭಂಗ ಮಾಡುತ್ತಿದ್ದು, ಈ ಹಿನ್ನೆಲೆ ಪಕ್ಷದ ಜಿಲ್ಲಾಧ್ಯಕ್ಷ‌ ಸತೀಶ್ ಕುಂಪಲ‌ ಅವರು ಮತ್ತೆ ಸ್ಪಷ್ಟೀಕರಣ ನೀಡಿದ್ದಾರೆ. ಆರೋಪಿ ಕೃಷ್ಣನ ತಂದೆ ಜಗನ್ನಿವಾಸ್ ರಾವ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದ್ದು, ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿ ಮುಖಂಡ ಎಂದು ಹೇಳುವುದು ತಪ್ಪು ಎಂದು ಅವರು

ಬಿಜೆಪಿ ಮತ್ತು ಜಗನ್ನಿವಾಸ ‌ರಾವ್‌ಗೆ ಯಾವುದೇ ಸಂಬಂಧ ಇಲ್ಲ: ಸತೀಶ್ ಕುಂಪಲ Read More »

ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದವರ ವಾಹನದ ಟೈರ್ ಸ್ಪೋಟ: ಓರ್ವ ಸಾವು, ಹಲವರಿಗೆ ಗಾಯ

ಕೊಪ್ಪಳ: ವಾಹನದ ಚಕ್ರ ಸ್ಪೋಟಗೊಂಡ ಪರಿಣಾಮ ಓರ್ವ ಸಾವನ್ನಪ್ಪಿ, ಏಳು ಜನರಿಗೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅಂಜನಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರ ವಾಹನದ ಚಕ್ರ ಸ್ಪೋಟಗೊಂಡಿರುವುದಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲು‌ ಮಾಡಿಕೊಂಡಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದವರ ವಾಹನದ ಟೈರ್ ಸ್ಪೋಟ: ಓರ್ವ ಸಾವು, ಹಲವರಿಗೆ ಗಾಯ Read More »

ತಂದೆಗೆ ಔಷಧ ತರಲು ಹೋದ ಬಾಲಕನ ಮೇಲೆ ಬಸ್ ಹರಿದು ಸಾವು

ಬೆಂಗಳೂರು: ತಂದೆಗೆ ಔಷಧ ತರಲೆಂದು ಹೋದ ಬಾಲಕ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟ ಘಟನೆ ನಡೆದಿದೆ. ವರುಣ್ (16) ಎಂಬಾತನೇ ‌ಮೃತ ದುರ್ದೈವಿ. ಬಾಗಲೂರು – ಹೆಣ್ಣೂರು ‌ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ವರುಣ್ ಸಾವನ್ನಪ್ಪಿರುವುದಾಗಿದೆ. ಅಪ್ಪನಿಗೆ ಅನಾರೋಗ್ಯದ ಹಿನ್ನೆಲೆ ವರುಣ್ ಔಷಧ ತರಲು ಹೋಗಿದ್ದು, ರಸ್ತೆಯಲ್ಲಿ ತಲೆ‌ ತಿರುಗಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಒಮ್ಮೆಲೇ ಬಂದ ಖಾಸಗಿ ಬಸ್ ಆತನ ಮೇಲೆ ಹರಿದು ವರುಣ್ ದಾರುಣವಾಗಿ ‌ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿ‌ಟಿವಿಯಲ್ಲಿ ‌ಸೆರೆಯಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ

ತಂದೆಗೆ ಔಷಧ ತರಲು ಹೋದ ಬಾಲಕನ ಮೇಲೆ ಬಸ್ ಹರಿದು ಸಾವು Read More »

ಅಳಿಯನ ಮನೆಯಲ್ಲೇ ಕನ್ನ ಹಾಕಿದ ಖತರ್ನಾಕ್ ಅತ್ತೆ

ಬೆಳಗಾವಿ: ತನ್ನ ಸಾಲ ತೀರಿಸಲು ಸ್ವಂತ ಅಳಿಯನ ಮನೆಯಲ್ಲೇ ಅತ್ತೆಯೊಬ್ಬಳು ಕಳ್ಳತನ ಮಾಡಿದ ಘಟನೆಯೊಂದು ಪಿರಣವಾಡಿಯಲ್ಲಿ ‌ನಡೆದಿದೆ. ಕನ್ನ ಹಾಕಿದ ಮಹಿಳೆಯನ್ನು ಪಿರಣವಾಡಿ ನಿವಾಸಿ ಉಜ್ವಲಾ ಎಂದು ಗುರುತಿಸಲಾಗಿದೆ. ಅತ್ತೆಯನ್ನು ಮನೆಯಲ್ಲಿ ನಿಲ್ಲಿಸಿ ದಂಪತಿ ಸ್ನೇಹಿತರ ಮದುವೆಗೆ ತೆರಳಿದ್ದರು. ಈ‌ ಸಮಯವನ್ನು ಉಪಯೋಗಿಸಿಕೊಂಡ ಅತ್ತೆ ಉಜ್ವಲಾ ಮನೆಯನ್ನೆಲ್ಲಾ ‌ಜಾಲಾಡಿ ಅಮೂಲ್ಯ ವಸ್ತುಗಳನ್ನು ದೋಚಿರುವುದಾಗಿದೆ. ಮನೆಯ ಕಪಾಟಿನಲ್ಲಿದ್ದ 16.57 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾಳೆ. ಉಜ್ವಲಾಳ ಈ ಕೃತ್ಯಕ್ಕೆ ‌ಶಿವ ಅಪ್ಪಯ ಎಂಬಾತನೂ ‌ಸಾತ್ ನೀಡಿದ್ದಾಗಿ ತಿಳಿದು

ಅಳಿಯನ ಮನೆಯಲ್ಲೇ ಕನ್ನ ಹಾಕಿದ ಖತರ್ನಾಕ್ ಅತ್ತೆ Read More »

ಬಿಸಿಲಿನ ಧಗೆ: ಕೂಲಿ ಕಾರ್ಮಿಕ ಸಾವು

ಯಾದಗಿರಿ: ಸುರಪುರ ತಾಲೂಕಿನ ಸತ್ಯಂಪೇಟೆ ಗ್ರಾಮದಲ್ಲಿ ಬಿಸಿಲಿನ ಬೇಗೆಗೆ ‌ಕೂಲಿ ಕಾರ್ಮಿಕನೊಬ್ಬ ‌ಮೃತಪಟ್ಟ ಘಟನೆ ನಡೆದಿದೆ. ಸಿದ್ದಪ್ಪ ಕೊಂಡಗುಳಿ ಎಂಬವರೇ ಮೃತ ದುರ್ದೈವಿ. ಸಿದ್ದಪ್ಪ ಅವರು ಕೂಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆಯೇ ತಮ್ಮ ಕೆಲಸ ಮುಗಿಸಿ ಮನೆಗೆ ಮರಳಿದ ಅವರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿದೆ. ಬಿಸಿಲು ಹೆಚ್ಚಾಗಿದ್ದ ಕಾರಣ ದಾಹ ತೀರಿಸಿಕೊಳ್ಳಲು ಮನೆಗೆ ಬಂದ ಕೂಡಲೇ ಅವರು ನೀರು ಕುಡಿದಿದ್ದಾರೆ. ಅದಾದ ಕೆಲವೇ ಕ್ಷಣಗಳಲ್ಲಿ ಅವರು ಮೃತಪಟ್ಟಿರುವುದಾಗಿದೆ. ಬಡ ಕುಟುಂಬದ ಸಿದ್ದಪ್ಪ ಅವರ ಸಾವಿನಿಂದ ಮನೆಯವರು

ಬಿಸಿಲಿನ ಧಗೆ: ಕೂಲಿ ಕಾರ್ಮಿಕ ಸಾವು Read More »

error: Content is protected !!
Scroll to Top