ಸುದ್ದಿ

ಭಾರತದ ಪ್ರಮುಖ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ‌ಸಂಚು ಹೂಡಿದ 9 ಜನರ ಬಂಧನ

ನವದೆಹಲಿ: ಭಾರತದ ಪ್ರಮುಖ ನಗರಗಳಾದ ನವದೆಹಲಿ, ಮುಂಬೈ, ಪಂಜಾಬಿನಲ್ಲಿ ಉಗ್ರವಾದ ‌ಸಂಬಂಧಿ ಕುಕೃತ್ಯಗಳನ್ನು ನಡೆಸುವ ಸಂಚು ರೂಪಿಸುತ್ತಿದ್ದ 9 ಜನರನ್ನು ನವದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಭೂಗತ‌ ಪಾತ್ರ ದಾವೂದ್ ಇಬ್ರಾಹಿಂ‌ನ ತಂಡದ ಜೊತೆಗೆ ನಿಕಟ ಸಂಬಂಧ ಇರುವುದಾಗಿಯೂ ಮೂಲಗಳು ತಿಳಿಸಿವೆ. ಬಂಧಿತ ಉಗ್ರರು ಬಹಳ ಸಮಯದಿಂದ ದೇಶದ ಪ್ರಮುಖ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದರು. ಇದೀಗ ಪೊಲೀಸರು ಈ ಸಂಚುಕೋರರನ್ನು ಬಂಧಿಸಿದ್ದು, ದೊಡ್ಡ ಪ್ರಮಾಣದ […]

ಭಾರತದ ಪ್ರಮುಖ ನಗರಗಳಲ್ಲಿ ಉಗ್ರ ಕೃತ್ಯಕ್ಕೆ ‌ಸಂಚು ಹೂಡಿದ 9 ಜನರ ಬಂಧನ Read More »

ಮೈಲುಸುತ್ತು ಬಳಸಿ ಮೀನು ಹಿಡಿಯುವ ಪ್ರಯತ್ನ: ನೂರಾರು ಮೀನುಗಳ ಸಾವು

ಶಿಶಿಲ: ಶಿಶಿಲೇಶ್ವರ ದೇವಸ್ಥಾನದ ಬಳಿಯ ಬರ್ಗುಳ ಗುಂಡಿ ಅಣೆಕಟ್ಟಿನಲ್ಲಿ ಮೀನು ಹಿಡಿಯಲು ಕಿಡಿಗೇಡಿಗಳು ಮೈಲುಸುತ್ತು ಬಳಸಿದ ಪರಿಣಾಮ ಸಾವಿರಾರು ಮೀನುಗಳು ಮಾರಣಹೋಮ ನಡೆದಿದೆ. ಈ ಕುಕೃತ್ಯ ಮೇ 29 ರಂದು ನಡೆದಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ನದಿಯ ನೀರಿನಲ್ಲಿ ತೇಲುತ್ತಿದ್ದ, ಸತ್ತು ಬಿದ್ದ ಮೀನುಗಳನ್ನು ನೋಡಿ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿರುವುದಾಗಿದೆ. ಮೀನುಗಳನ್ನು ಹಿಡಿಯಲು ವಿಷಕಾರಿ ರಾಸಾಯನಿಕಗಳನ್ನು ಬಳಕೆ ಮಾಡಿದ ಕಾರಣ ಸಣ್ಣಪುಟ್ಟ ನೂರಾರು ಮೀನುಗಳು ಸಾವನ್ನಪ್ಪಿವೆ. ಆ ಮೀನುಗಳನ್ನು ಕಿಡಿಗೇಡಿಗಳು ಅಲ್ಲೇ ಬಿಟ್ಟು ತೆರಳಿದ್ದಾರೆ. ಪ್ರಕರಣಕ್ಕೆ

ಮೈಲುಸುತ್ತು ಬಳಸಿ ಮೀನು ಹಿಡಿಯುವ ಪ್ರಯತ್ನ: ನೂರಾರು ಮೀನುಗಳ ಸಾವು Read More »

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿಯೇಟು ‌ನೀಡಿದ ದಿಟ್ಟ ಮಹಿಳೆ

ರಾಯಚೂರು: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಮಹಿಳೆಯೊಬ್ಬರು ‌ಚಪ್ಪಲಿಯೇಟು ನೀಡುವ ಮೂಲಕ ಪ್ರತ್ಯುತ್ತರ ನೀಡಿದ ಘಟನೆ ಲಿಂಗಸುಗೂರು ಪಟ್ಟಣದ ಬಸ್ಸು ನಿಲ್ದಾಣದ ಸಮೀಪ ನಡೆದಿದೆ. ಮಹಿಳೆ ಬಸ್ಸಿಗಾಗಿ ‌ಕಾಯುತ್ತಾ ನಿಂತಿದ್ದರು. ಆ ಸಂದರ್ಭದಲ್ಲಿ ಯುವಕನೊಬ್ಬ ಅವರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಹಾಗೆಯೇ ಅಶ್ಲೀಲವಾಗಿ ‌ಮಾತನಾಡಿದ್ದಾನೆ. ಯುವಕನ ದುರ್ವರ್ತನೆಗೆ ‌ಮಹಿಳೆ ಕೆನ್ನೆಗೆ ಬಾರಿಸಿದ ಅವರು ಆತನಿಗೆ ಚಪ್ಪಲಿಯೇಟು ಸಹ ನೀಡಿ ತಕ್ಕ ಶಾಸ್ತಿ ‌ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸ್ಥಳೀಯರು ಸಹ ಯುವಕನಿಗೆ ಧರ್ಮದೇಟು ನೀಡಿ ಪಾಠ ಕಲಿಸಿದ್ದಾರೆ.

ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಚಪ್ಪಲಿಯೇಟು ‌ನೀಡಿದ ದಿಟ್ಟ ಮಹಿಳೆ Read More »

ಹೊಲದಲ್ಲಿ ನೀರು ಕಟ್ಟಲು ಹೋದ ರೈತನ ಮೇಲೆ ಚಿರತೆ ದಾಳಿ

ವಿಜಯನಗರ: ಜಗತ್ಪ್ರಸಿದ್ಧ ಹಂಪಿಯ ಸಮೀಪದ ಕಡ್ಡಿರಾಂಪುರದಲ್ಲಿ ಚಿರತೆಯೊಂದು ‌ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ಆತಂಕಕ್ಕೆ ಒಳಗಾಗಿರುವ ಘಟನೆ ನಡೆದಿದೆ. ರೈತ ಖಾರದರುಡಿ ರಾಜು(40) ಎಂಬವರೇ ‌ಚಿರತೆ ದಾಳಿಗೆ ಒಳಗಾದವರು. ಹೊಲದಲ್ಲಿ ರಾತ್ರಿ ವೇಳೆ ನೀರು ಕಟ್ಟುತ್ತಿದ್ದ ಸಮಯದಲ್ಲಿ ಚಿರತೆ ಅವರ ಕಾಲಿಗೆ ಪರಚಿದ ಪರಿಣಾಮ ತೀವ್ರ ಪ್ರಮಾಣದಲ್ಲಿ ಗಾಯಗಳಾಗಿವೆ. ಗಾಯಾಳು ರಾಜು ಅವರಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲೈದು ದಿನಗಳ ಹಿಂದೆಯಷ್ಟೇ ಹಂಪಿಯ ಜನತಾ ಪ್ಲಾಟ್ ನಲ್ಲಿ ತಡ ರಾತ್ರಿ

ಹೊಲದಲ್ಲಿ ನೀರು ಕಟ್ಟಲು ಹೋದ ರೈತನ ಮೇಲೆ ಚಿರತೆ ದಾಳಿ Read More »

ಬುಧವಾರ ಸಂಜೆ ಡಿಕೆಶಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

ಎಂಟರಷ್ಟು ಸಚಿವರು ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕಾರ ಬೆಂಗಳೂರು : ಡಿ.ಕೆ.ಶಿವಕುಮಾರ್‌ ಪದಗ್ರಹಣಕ್ಕೆ ಮುಹೂರ್ತ ನಿಗದಿಯಾಗಿದೆ. ಬುಧವಾರ ನೂತನ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ 4 ಗಂಟೆಯ ನಂತರ ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್‌ ಮುಂದೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆಶಿ ಜೊತೆಗೆ ಸುಮಾರು ಎಂಟರಷ್ಟು ಸಚಿವರು ಪ್ರಮಾಣವಚನ ಸ್ವೀಕಾರಿಸಲಿದ್ದಾರೆ. ಜೋತಿಷಿ ದ್ವಾರಕನಾಥ್‌ ಅವರು ಡಿಕೆಶಿಗೆ ಅಧಿಕಾರ ಗ್ರಹಣದ ಮೂಹೂರ್ತ ನೀಡಿದ್ದಾರೆ ಎನ್ನಲಾಗಿದೆ. ಅವರ ಸಲಹೆಯಂತೆ ಡಿಕೆಶಿ ಬುಧವಾರ ಗೋಧೂಳಿ ಮುಹೂರ್ತವನ್ನು ಆರಿಸಿಕೊಂಡಿದ್ದಾರೆ.

ಬುಧವಾರ ಸಂಜೆ ಡಿಕೆಶಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ Read More »

ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗುವಿನ ಚಿಕಿತ್ಸೆಗೆ ಬಸ್ಸನ್ನೇ ಆಸ್ಪತ್ರೆಗೊಯ್ದ ಸಿಬ್ಬಂದಿ

ಸಿಟಿ ಬಸ್‌ ಚಾಲಕ, ಕಂಡಕ್ಟರ್‌ ಮಾನವೀಯತೆಗೆ ವ್ಯಾಪಕ ಪ್ರಶಂಸೆ ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಹಿಂದಿನಿಂದ ಬರುತ್ತಿದ್ದ ಇನ್ನೊಂದು ಸಿಟಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವ ಮೂಲಕ ಮಾನವೀಯತೆಯ ಕಾರ್ಯ ಮಾಡಿದ್ದಾರೆ. ಕಾವೂರಿನಿಂದ ಕುಂಜತ್‌ಬೈಲ್‌ಗೆ ರೂಟ್ ನಂ. 13B ನಲ್ಲಿ ಪ್ರಯಾಣಿಸುತ್ತಿದ್ದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಮಾನವೀಯತೆ ಮೆರೆದು ಮಾದರಿಯಾದರು. ಮರಕಡ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ

ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗುವಿನ ಚಿಕಿತ್ಸೆಗೆ ಬಸ್ಸನ್ನೇ ಆಸ್ಪತ್ರೆಗೊಯ್ದ ಸಿಬ್ಬಂದಿ Read More »

ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಎಲ್ಲಿ ಹೋಯಿತು? : ಸಿದ್ದರಾಮಯ್ಯಗೆ ಸುರೇಶ್‌ ಕುಮಾರ್‌ ಪ್ರಶ್ನೆ

ಎರಡು ತಿಂಗಳ ಗೃಹಲಕ್ಷ್ಮಿ ಹಣ ಪಾವತಿಯಾಗದಿರುವ ಬಗ್ಗೆ ಸ್ಪಷ್ಟನೆ ಕೊಡಲು ಆಗ್ರಹ ಬೆಂಗಳೂರು: 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಬಾಕಿ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಹಂಗಾಮಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬಹಿರಂಗ ಪತ್ರ ಬರೆದಿದ್ದಾರೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿಬಾಕಿಗೆ ಸ್ಪಷ್ಟನೆ ಹಾಗೂ ಬಾಕಿ ಪಾವತಿ ಮಾಡುವಂತೆ ಒತ್ತಾಯಿಸಿ ಸಿದ್ದಾರೆ. ತಮ್ಮ ಪಕ್ಷದ ಸೂಚನೆಯಂತೆ ತಾವು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಇಂದಿನ

ಗೃಹಲಕ್ಷ್ಮಿಯ 5 ಸಾವಿರ ಕೋಟಿ ರೂ. ಎಲ್ಲಿ ಹೋಯಿತು? : ಸಿದ್ದರಾಮಯ್ಯಗೆ ಸುರೇಶ್‌ ಕುಮಾರ್‌ ಪ್ರಶ್ನೆ Read More »

34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ

ಕೊಲೆ ಆರೋಪದಲ್ಲಿ 20 ವರ್ಷ ರಿಯಾಧ್‌ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ಕೋಝಿಕ್ಕೋಡ್: ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದ 20 ವರ್ಷಗಳಿಂದ ಮರಣದಂಡನೆ ಎದುರಿಸುತ್ತಿದ್ದ ಕೇರಳದ ಕೋಝಿಕ್ಕೋಡ್ ಸಮೀಪದ ರಾಮನಟ್ಟುಕರೆಯ ಕೊದಂಪುಳ ನಿವಾಸಿ ಅಬ್ದುಲ್ ರಹೀಮ್ ಸುಮಾರು 34 ಕೋಟಿ ರೂಪಾಯಿ ರಕ್ತನಿಧಿ (ಬ್ಲಡ್ ಮನಿ) ಪಾವತಿಸಿದ ನಂತರ ಬಿಡುಗಡೆಯಾಗಿ ಈದ್ ಹಬ್ಬದ ದಿನದಂದು ತಮ್ಮ ಸ್ವಗೃಹಕ್ಕೆ ಮರಳಿದ್ದಾರೆ. ವೃತ್ತಿಯಲ್ಲಿ ಚಾಲಕರಾಗಿದ್ದ ರಹೀಮ್ ಸೌದಿಗೆ ಹೋದ ಕೇವಲ ಒಂದು ತಿಂಗಳ ಒಳಗಾಗಿ ತಮ್ಮ ಮಾಲೀಕನ ಮಗನ ಜೀವ ರಕ್ಷಕ

34 ಕೋಟಿ ರೂ ರಕ್ತನಿಧಿ ಪಾವತಿಯ ಬಳಿಕ ಕೇರಳದ ವ್ಯಕ್ತಿ ಬಿಡುಗಡೆ Read More »

ಮುಂಗಾರು ಆಗಮನ ತುಸು ವಿಳಂಬ : ಜೂನ್‌ 4ರಂದು ಕರಾವಳಿ ಪ್ರವೇಶ ನಿರೀಕ್ಷೆ

ಜೂನ್‌ ಎರಡನೇ ವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಮಂಗಳೂರು : ಕರಾವಳಿಗೆ ಮುಂಗಾರು ಪ್ರವೇಶ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ತಾತ್ಕಾಲಿಕವಾಗಿ ಕಡಿಮೆಯಾಗುವ ಸಾಧ್ಯತೆಯಿದೆ. ಜೂನ್ 4ರ ಸುಮಾರಿಗೆ ಮುಂಗಾರು ಕರಾವಳಿಗೆ ಪ್ರವೇಶಿಸುವ ನಿರೀಕ್ಷೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಹೆಚ್ಚಿನ ತಾಪಮಾನ ಮುಂದುವರಿದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರಾಸರಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಮತ್ತು 36 ಡಿಗ್ರಿ ಸೆಲ್ಸಿಯಸ್

ಮುಂಗಾರು ಆಗಮನ ತುಸು ವಿಳಂಬ : ಜೂನ್‌ 4ರಂದು ಕರಾವಳಿ ಪ್ರವೇಶ ನಿರೀಕ್ಷೆ Read More »

ಜಮೀನಿಗಾಗಿ ನಡೆದ ರಕ್ತದೋಕುಳಿ : ಆರು ಜನರ ಬರ್ಬರ ಹತ್ಯೆ

ಹೊಲದಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಗುಂಡಿಕ್ಕಿ ಸಾಯಿಸಿದ ದುಷ್ಕರ್ಮಿಗಳು ವಿಜಯಪುರ : ಆಸ್ತಿ ವಿವಾದ ಹಿನ್ನೆಲೆ 6 ಜನರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಚಂದು ನಿರಾಳೆ, ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ, ಶಬ್ಬೀರ್ ನದಾಫ್ ಸೇರಿದಂತೆ 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜಮೀನು ವಿಚಾರವಾಗಿ ಅಪ್ಪುಗೌಡ ಪಾಟೀಲ್ ಹಾಗೂ ರೇವಣಸಿದ್ದಪ್ಪ‌ ನಿರಾಳೆ ಕುಟುಂಬದ

ಜಮೀನಿಗಾಗಿ ನಡೆದ ರಕ್ತದೋಕುಳಿ : ಆರು ಜನರ ಬರ್ಬರ ಹತ್ಯೆ Read More »

error: Content is protected !!
Scroll to Top