ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಲು ಎಂಬಲ್ಲಿ ಏ. 3 ರಂದು ಸಂಭವಿಸಿದೆ. ಶಿವಪ್ಪ ಗೌಡ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 4 ವರ್ಷಗಳ ಹಿಂದೆ ದಂಪತ್ಯದಲ್ಲಿ ಮನಸ್ಧಾಪ ಉಂಟಾಗಿ ಆತನ ಪತ್ನಿ ತವರು ಮನೆಯಲ್ಲಿ ನೆಲೆಸಿದ ಕಾರಣ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು.

ಏ. 1 ರಂದು ಶಿವಪ್ಪ ಗೌಡ ಕಾಣೆಯಾದ ಬಗ್ಗೆ ಅಣ್ಣ ತಿಮ್ಮಪ್ಪ ಗೌಡ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿದ್ದು, ಏ. 3 ರಂದು ಚಿಕ್ಕಮುಡ್ನೂರು ಗ್ರಾಮ ಗುತ್ತಿಕಲ್ಲು ಎಂಬಲ್ಲಿ ಶೀವಪ್ಪನು ಗೇರು ಮರದ ಕೊಂಬೆಗೆ ಲುಂಗಿಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಮೃತ ಪಟ್ಟು ಕೊಳೆತ ಸ್ದಿತಿಯಲ್ಲಿ ಇರುವುದಾಗಿ ಸಹೋದರ ಪ್ರಕಾಶ ಗೌಡನು ನೀಡಿದ ಮಾಹಿತಿ ನೀಡಿದನು. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top