ವಾರಕ್ಕೊಮ್ಮೆ ಪುತ್ತೂರು ಪೋಲೀಸ್ ಠಾಣೆಯಲ್ಲಿ ಸಹಿ ಹಾಕುವ ಷರತ್ತು
ಬೆಳ್ತಂಗಡಿ: ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರ ತಾಯಿಯನ್ನು ನಿಂದಿಸಿದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿಯವರು ಸಲ್ಲಿಸಿದ್ದ ದೂರಿನ ಮೇಲಿನ ಬಂಧನದ ಭೀತಿಯಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಿಮರೋಡಿಯವರ ಮಾತಿನ ಬಗ್ಗೆ ಕಟುವಾದ ಟೀಕೆ ಮಾಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಡಾ.ವೀರೇಂದ್ರ ಹೆಗ್ಗಡೆಯವರ ವಿರುದ್ಧವಾಗಿ ಮಹೇಶ್ ತಿಮರೋಡಿ ಆಡಿಯೋದಲ್ಲಿ ಆಡಿದ ಮಾತುಗಳ ಬಗ್ಗೆ ಉಲ್ಲೇಖಿಸಿ ಕಠಿಣ ಪದಗಳಲ್ಲಿ ಉಲ್ಲೇಖ ಮಾಡಿರುವ ನ್ಯಾಯಲಯ. ವಾರಕ್ಕೊಮ್ಮೆ ಪುತ್ತೂರು ಪೋಲೀಸ್ ಠಾಣೆಯಲ್ಲಿ ಹಾಜರಾಗಿ ಸಹಿ ಮಾಡುವಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
























