ಆಟೋ – ಬೈಕ್ ಅಪಘಾತ: ಆರು ತಿಂಗಳ ಮಗು ಸೇರಿ ಮೂವರು ಸಾವು

ಬೆಳಗಾವಿ: ಆಟೋ ರಿಕ್ಷಾ ಮತ್ತು ಬೈಕ್ ನಡುವೆ ಬೆಳಗಾವಿ ಜಿಲ್ಲೆಯ ರಾಯಭಾಗದ ರೈಲು ನಿಲ್ದಾಣದ ಸಮೀಪ ಭೀಕರ ಅಪಘಾತ ಸಂಭವಿಸಿದ್ದು, ದುರ್ಘಟನೆಯಲ್ಲಿ ಒಂದೇ ಕುಟುಂಬದ ಮೂರು ಜನರು ಮೃತಪಟ್ಟ ಘಟನೆ ನಡೆದಿದೆ.

ಅಪ್ಪ, ಅಮ್ಮನ ಜೊತೆಗೆ ಆರು ತಿಂಗಳ ಮಗು ಮೃತಪಟ್ಟಿರುವುದಾಗಿದೆ.

ಬೊಮ್ಮನಾಳ‌ ನಿವಾಸಿಗಳಾದ ಮಹಾಂತೇಶ್ ಮಾನೆ, ಸಾಕ್ಷಿ ಮಾನೆ ಹಾಗೂ ಇನ್ನೂ ಹೆಸರು ಸಹ ಇರಿಸದ ಅವರ ಆರು ತಿಂಗಳ ಮಗು ಈ ದುರ್ಘಟನೆಯಲ್ಲಿ ಬಲಿಯಾದ ದುರ್ದೈವಿಗಳು.





















































 
 

ದಂಪತಿ ಮಗುವಿನ ಜೊತೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆಟೋ ಒಂದು ಡಿಕ್ಕಿ ಹೊಡೆದಿದ್ದು, ಮೂರೂ ಮಂದಿ ಕೆಳಕ್ಕೆ ಬಿದ್ದು ತಕ್ಷಣವೇ ಮೃತಪಟ್ಟಿದ್ದಾರೆ.

error: Content is protected !!
Scroll to Top